ಟೀಂ ಇಂಡಿಯಾ ಮುಖ್ಯ ಕೋಚ್ ಆಗಲ್ಲ ಬೇರೆ ಹುದ್ದೆ ಕೊಡಿ ಎಂದ ವೆಂಕಟೇಶ್ ಪ್ರಸಾದ್

ಶುಕ್ರವಾರ, 30 ಜೂನ್ 2017 (08:30 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಅರ್ಜಿ ಹಾಕಿದ್ದಾರೆ ಎಂಬ ವರದಿಗಳನ್ನು ಅವರು ತಳ್ಳಿ ಹಾಕಿದ್ದಾರೆ. ಆದರೆ ಸಹಾಯಕ ಕೋಚ್ ಹುದ್ದೆ ಕೊಡಿ ಎಂದಿದ್ದಾರೆ.

 
ಮುಖ್ಯ ಕೋಚ್ ಹುದ್ದೆ ಬೇಡ, ಸಹಾಯಕ ಕೋಚ್ ಅಥವಾ ಬೌಲಿಂಗ್ ಕೋಚ್ ಹುದ್ದೆ ನೀಡಿ. ನಿಭಾಯಿಸುತ್ತೇನೆ ಎಂದು ವೆಂಕಟೇಶ್ ಪ್ರಸಾದ್ ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಹಿಂದೆಯೂ ಒಮ್ಮೆ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಅನುಭವವಿರುವ ಪ್ರಸಾದ್ ಇದೀಗ ಭಾರತ ಎ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆ ಅಧಿಕಾರಾವಧಿ ಸೆಪ್ಟೆಂಬರ್ ಗೆ ಕೊನೆಗೊಳ್ಳಲಿದೆ. ಹೀಗಾಗಿ ಕೋಚ್ ಹುದ್ದೆಯತ್ತ ಕಣ್ಣು ನೆಟ್ಟಿದ್ದಾರೆ.

ಆದರೆ ಮಾಜಿ ಕೋಚ್ ಅನಿಲ್ ಕುಂಬ್ಳೆ ಜಹೀರ್ ಖಾನ್ ರನ್ನು ಈ ಸ್ಥಾನಕ್ಕೆ ಈ ಮೊದಲು ಶಿಫಾರಸ್ಸು ಮಾಡಿದ್ದರು. ಅಲ್ಲದೆ, ಅನಿಲ್ ಕುಂಬ್ಳೆ ಕೋಚ್ ಆಗುವುದಕ್ಕಿಂತ ಮೊದಲು ಭರತ್ ಅರುಣ್ ಬೌಲಿಂಗ್ ಕೋಚ್ ಆಗಿದ್ದರು. ನಂತರ ಸ್ವತಃ ಕುಂಬ್ಳೆ ಬೌಲರ್ ಆಗಿದ್ದರಿಂದ ಆ ಸ್ಥಾನಕ್ಕೆ ಬೇರೆಯವರನ್ನು ಆರಿಸಿರಲಿಲ್ಲ. ಆದರೆ ರವಿ ಶಾಸ್ತ್ರಿ ಕೋಚ್ ಆದರೆ ಮತ್ತೆ ಭರತ್ ಗೆ ಸ್ಥಾನ ಸಿಕ್ಕಿದರೂ ಅಚ್ಚರಿಯಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ