ಸದ್ದಿಲ್ಲದೇ ಎಂಗೇಜ್ ಆದ ರಿಂಕು ಸಿಂಗ್: ಹುಡುಗಿ ಸಾಮಾನ್ಯದವಳಲ್ಲ

Sampriya

ಶುಕ್ರವಾರ, 17 ಜನವರಿ 2025 (18:53 IST)
Photo Courtesy X
ನವದೆಹಲಿ: ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್ ಅವರು ಉತ್ತರ ಪ್ರದೇಶದ ಮಚ್ಲಿಶಹರ್ ಪ್ರತಿನಿಧಿಸುವ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ರಿಂಕು ಅಥವಾ ಪ್ರಿಯಾ ಅವರ ನಿಶ್ಚಿತಾರ್ಥದ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸಲಿಲ್ಲ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ರಿಂಕು ಸಿಂಗ್ ಹಾಗೂ ಪ್ರಿಯಾ ಎಂಗೇಜ್ಮೆಂಟ್ ಸುದ್ದಿ ವೈರಲ್ ಆಗಿದೆ.

ಭಾರತೀಯ ಕ್ರಿಕೆಟ್‌ನಲ್ಲಿ ಉದಯೋನ್ಮುಖ ತಾರೆಯಾಗಿರುವ ರಿಂಕು ಸಿಂಗ್ ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಟಿ20 ತಂಡದ ಭಾಗವಾಗಿದ್ದಾರೆ.

ಪ್ರಿಯಾ ಸರೋಜ್, 2024 ರಲ್ಲಿ 25 ನೇ ವಯಸ್ಸಿನಲ್ಲಿ ಲೋಕಸಭಾ ಸಂಸದರಾದರು. ಈ ಮೂಲಕ ಅತೀ ಚಿಕ್ಕ ವಯಸ್ಸಿನಲ್ಲಿ ಸಂಸತ್ ಪ್ರವೇಶಿಸಿದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಬೆಂಬಲದೊಂದಿಗೆ, ಅವರು ಮಚ್ಲಿಶಹರ್ ಕ್ಷೇತ್ರದಲ್ಲಿ ಬಿಜೆಪಿಯ ಹಿರಿಯ ಅಭ್ಯರ್ಥಿ ಬಿಪಿ ಸರೋಜ್ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದರು. ನವೆಂಬರ್ 23, 1998 ರಂದು ಜನಿಸಿದ ಪ್ರಿಯಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದಾರೆ, ಈ ಹಿಂದೆ 1999, 2004 ಮತ್ತು 2009 ರಲ್ಲಿ ಇದೇ ಕ್ಷೇತ್ರದಿಂದ ಸಂಸದರಾಗಿ ಸೇವೆ ಸಲ್ಲಿಸಿದ ತಮ್ಮ ತಂದೆ ತೂಫಾನಿ ಸರೋಜ್ ಅವರ ರಾಜಕೀಯ ಪರಂಪರೆಯನ್ನು ಮುಂದುವರೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ