ಮುಂಬೈ: ವಿರಾಟ್ ಕೊಹ್ಲಿ ಸದ್ಯಕ್ಕೆ ಅಮೆರಿಕಾದಲ್ಲಿ ಗೆಳತಿ ಅನುಷ್ಕಾ ಶೆಟ್ಟಿ ಜತೆಗೆ ರಜಾ ಮಜಾ ಮಾಡುತ್ತಿದ್ದಾರೆ. ಇತ್ತ ಟೀಂ ಇಂಡಿಯಾದಲ್ಲೂ ಎಲ್ಲವೂ ತಾವೆಣಿಸಿದಂತೆಯೇ ನಡೆಯುತ್ತಿದೆ. ಹಾಗಿದ್ದರೂ ತಾವಿಬ್ಬರೂ ಪ್ರೇಮಿಗಳು ಎಂದು ಇಬ್ಬರೂ ಬಹಿರಂಗವಾಗಿ ಹೇಳಿಕೊಳ್ಳಲ್ಲ.
ಆದರೇನಂತೆ, ವಿರಾಟ್ ಅಭಿಮಾನಿಗಳು, ಅನುಷ್ಕಾರನ್ನು ಬಾಬಿ (ಅತ್ತಿಗೆ) ಎಂದೇ ತಿಳಿದಿದ್ದಾರೆ. ಹೀಗಿರುವ ವಿರಾಟ್ ಮತ್ತು ಅನುಷ್ಕಾ ತಾವು ಅಮೆರಿಕಾದಲ್ಲಿ ಮಜಾ ಮಾಡುತ್ತಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಅದರ ಜತೆಗೆ ‘ನನ್ನ ಪ್ರೀತಿಯ ಹುಡುಗಿಯ ಜತೆ ಒಳ್ಳೇ ಬಿಡುವಿನ ದಿ’ ಎಂದೂ ಅಡಿಬರಹ ಬರೆದಿದ್ದರು.
ಈ ಫೋಟೋ ಅಭಿಮಾನಿಗಳಿಗೆ ಅದೆಷ್ಟು ಇಷ್ಟವಾಗಿದೆ ಅಂದರೆ, 1 ಲಕ್ಷ ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. 22 ಸಾವಿರಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಎಷ್ಟು ವೈರಲ್ ಆಯ್ತು ಎನ್ನುವುದಕ್ಕೆ ಇದುವೇ ಸಾಕ್ಷಿ.