ವಿರಾಟ್ ಕೊಹ್ಲಿ ಆರೋಪಗಳೆಲ್ಲಾ ಬರೀ ಸುಳ್ಳು: ಸ್ಟೀವ್ ಸ್ಮಿತ್

ಗುರುವಾರ, 16 ಮಾರ್ಚ್ 2017 (09:49 IST)
ರಾಂಚಿ: ದ್ವಿತೀಯ ಟೆಸ್ಟ್ ನಲ್ಲಿ ಹುಟ್ಟಿಕೊಂಡ ಡಿಆರ್ ಎಸ್ ವಿವಾದ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ. ಮತ್ತೊಮ್ಮೆ ಈ ವಿಚಾರದ ಬಗ್ಗೆ ಮಾತನಾಡಿರುವ ಆಸ್ಟ್ರೇಲಿಯಾ ನಾಯಕ  ಸ್ಟೀವ್ ಸ್ಮಿತ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರೋಪಗಳೆಲ್ಲಾ ಸುಳ್ಳು ಎಂದಿದ್ದಾರೆ.

 
ಆಸ್ಟ್ರೇಲಿಯನ್ನರು ಇಂತಹ ಮೋಸಗಳನ್ನು ಆಗಾಗ ಮಾಡುತ್ತಾರೆ ಎಂಬ ಕೊಹ್ಲಿ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಆವತ್ತು ನನ್ನ ಬುದ್ಧಿಗೆ ಮಂಕು ಕವಿದಿತ್ತು. ನಾನು ಮಾಡಿದ್ದು ತಪ್ಪು ಎಂದು ಪಂದ್ಯ ಮುಗಿದ ಮೇಲೆ ತಪ್ಪೊಪ್ಪಿಕೊಂಡಿದ್ದೆ.

ಹೀಗಾಗಿ ಕೊಹ್ಲಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಾನು ಆ ಘಟನೆಯ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದೇನೆ ಎಂದು ಸ್ಮಿತ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ