ಈ ಪುಸ್ತಕದಲ್ಲಿದೆ ವಿರಾಟ್ ಕೊಹ್ಲಿಯ ಸೀಕ್ರೆಟ್!

ಗುರುವಾರ, 25 ಮೇ 2017 (09:29 IST)
ನವದೆಹಲಿ: ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದ ಯಶಸ್ವೀ ನಾಯಕ ಹಾಗೂ ಬ್ಯಾಟ್ಸ್ ಮನ್ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರ ಈ ಯಶಸ್ಸಿನ ಗುಟ್ಟೇನು?

 
ವಿಶ್ವದ ಘಟಾನುಘಟಿ ಬೌಲರ್ ಗಳೂ ಕೊಹ್ಲಿಯ ಹುಳುಕುಗಳನ್ನು ಪತ್ತೆ ಮಾಡಲು ಹಾತೊರೆಯುತ್ತಾರೆ. ಆ ಮೂಲಕ ಅವರ ಗೆಲುವಿನ ನಾಗಲೋಟಕ್ಕೆ ಕಡಿವಾಣ ಹಾಕುವುದು ಹೇಗೆ ಎಂದು ಚಿಂತಿಸುತ್ತಿರುತ್ತಾರೆ.

ಅವರ ಯಶಸ್ಸಿನ ಗುಟ್ಟೇನು ಎಂಬುದು ಅಭಿರೂಪ್ ಭಟ್ಟಾಚಾರ್ಯ ಎಂಬವರು ಬರೆದ ಪುಸ್ತಕದಲ್ಲಿ ಹೇಳಲಾಗಿದೆಯಂತೆ. ‘ವಿನ್ನಿಂಗ್ ಲೈಕ್ ವಿರಾಟ್: ಥಿಂಕ್ ಆಂಡ್ ಸಕ್ಸೀಡ್ ಲೈಕ್ ಕೊಹ್ಲಿ’ ಎಂಬ ಪುಸ್ತಕವೊಂದು ಬಿಡುಗಡೆಯಾಗಿದೆ.

ಇದರಲ್ಲಿ ಕೊಹ್ಲಿ ಬಗೆಗೆ ಅನೇಕ ಕುತೂಹಲಕಾರಿ ಮತ್ತು ಅಚ್ಚರಿಯ ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಪುಸ್ತಕದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ