ಗೆಳತಿ ಜತೆ ವಿರಾಟ್ ಕೊಹ್ಲಿ ಕ್ರಿಸ್ ಮಸ್ ಪಾರ್ಟಿ

ಸೋಮವಾರ, 26 ಡಿಸೆಂಬರ್ 2016 (07:34 IST)
ನವದೆಹಲಿ: ವಿರಾಟ್ ಕೊಹ್ಲಿ ಸದ್ಯಕ್ಕೆ ರಜಾ ಮಜಾ ಮಾಡುತ್ತಿದ್ದಾರೆ. ಉತ್ತರಾಖಂಡ್ ರಾಜ್ಯದ ರಾಯಭಾರಿಯೂ ಆಗಿದ್ದಾರೆ. ವಿಶ್ವದಾದ್ಯಂತ ಕ್ರಿಸ್ ಮಸ್ ಹಬ್ಬ ಜೋರಾಗಿ ನಡೆಯುತ್ತಿದೆ. ಇದೆಲ್ಲದರ ಸದುಪಯೋಗವನ್ನು ಗೆಳತಿ ಅನುಷ್ಕಾ ಶರ್ಮಾ ಜತೆ ಚೆನ್ನಾಗಿಯೇ ಮಾಡಿದ್ದಾರೆ.


ಅನುಷ್ಕಾ ಜತೆ ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೊಹ್ಲಿ ನಂತರ ನರೇಂದ್ರನಗರ್ ನಲ್ಲಿ ಕ್ರಿಸ್ ಮಸ್ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. ಸ್ವತಃ ಉತ್ತರಾಖಂಡ್ ಸಿಎಂ ಹರೀಶ್ ರಾವತ್ ತಮ್ಮ ಟ್ವಿಟರ್ ನಲ್ಲಿ ಈ ವಿಷಯ ಬಹಿರಂಗಪಡಿಸಿದ್ದು, ಜೋಡಿ ಜೀವಗಳಿಗೆ ಸ್ವಾಗತ ಕೋರಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ಕೊಹ್ಲಿ ಉತ್ತರಾಖಂಡ ರಾಜ್ಯದ ಪ್ರವಾಸೋದ್ಯಮಕ್ಕೆ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದರು. ಇದೀಗ ಅವರು ಗೆಳತಿ ಜತೆ ಇಲ್ಲಿ ಸುತ್ತಾಡಿದ್ದು, ಭರ್ಜರಿ ಪ್ರಚಾರ ಪಡೆಯುವ ಮೂಲಕ ತಮ್ಮ ಸ್ಥಾನವನ್ನು ಚೆನ್ನಾಗಿಯೇ ನಿಭಾಯಿಸುತ್ತಿದ್ದಾರೆ ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ