ಟ್ವಿಟರ್ ನಲ್ಲೂ ಕುಂಬ್ಳೆ ಮೇಲೆ ಕೋಪ ತೀರಿಸಿಕೊಂಡ ಕೊಹ್ಲಿ!

ಶುಕ್ರವಾರ, 23 ಜೂನ್ 2017 (09:12 IST)
ನವದೆಹಲಿ: ಮಾಜಿ ಕೋಚ್ ಅನಿಲ್ ಕುಂಬ್ಳೆ ತಮಗಿದ್ದ ಅಸಮಾಧಾನವನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ನಲ್ಲೂ ತೋರಿಸಿಕೊಂಡಿದ್ದಾರೆ.

 
ಹಾಗಂತ  ಕುಂಬ್ಳೆ ವಿರುದ್ಧ ಯಾವುದೇ ಟ್ವೀಟ್ ಮಾಡಿಲ್ಲ. ಆದರೆ ಕಳೆದ ವರ್ಷ ಹಾಕಿದ್ದ ಟ್ವೀಟ್ ಒಂದನ್ನು ಡಿಲೀಟ್ ಮಾಡಿದ್ದಾರೆ!

ಕೋಚ್ ಆಗಿ ಕುಂಬ್ಳೆ ನೇಮಕಗೊಂಡ ಸಂದರ್ಭದಲ್ಲಿ ಕೊಹ್ಲಿ ‘ಕುಂಬ್ಳೆ ಸರ್ ನಿಮಗೆ ಹೃದಯಪೂರ್ವಕ ಸ್ವಾಗತ.. ಭಾರತೀಯ ಕ್ರಿಕೆಟ್ ಗೆ ನೀವು ಸಾಕಷ್ಟು ಕೊಡುಗೆ ನೀಡಿದ್ದೀರಿ. ನಿಮ್ಮ ಸೇವೆ ತಂಡಕ್ಕೆ ಅಗತ್ಯವಾಗಿ ಬೇಕಾಗಿದೆ’ ಎಂದು ಟ್ವೀಟ್ ಮಾಡಿದ್ದರು.

ಅದು ನಿನ್ನೆಯವರೆಗೂ ಕೊಹ್ಲಿಯ ಟ್ವಿಟರ್ ಖಾತೆಯಲ್ಲಿತ್ತು. ಆದರೆ ಇದೀಗ ಅದನ್ನೂ ಡಿಲೀಟ್ ಮಾಡಿದ್ದಾರೆ. ಆ ಟ್ವೀಟ್ ಈಗ ಲಭ್ಯವಿಲ್ಲ ಎಂದು ಸಂದೇಶ ತೋರಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ