ಮಳೆಯಲ್ಲೇ ಪ್ರೇಕ್ಷಕರ ರಂಜಿಸಿದ ಧೋನಿ, ಕೊಹ್ಲಿ
ಈ ವೇಳೆ ಮೈದಾನಕ್ಕಿಳಿದ ಭಾರತೀಯ ಆಟಗಾರರು ಬ್ಯಾಟಿಂಗ್ ನಡೆಸಿ ಪ್ರೇಕ್ಷಕರಿಗೆ ಸ್ವಲ್ಪ ಮಟ್ಟಿಗೆ ಖುಷಿ ನೀಡಿದರು. ಬಲಗೈ ಬ್ಯಾಟ್ಸ್ ಮನ್ ಗಳಾದ ಧೋನಿ, ಕೊಹ್ಲಿ ಎಡಗೈಯಲ್ಲಿ ಬ್ಯಾಟಿಂಗ್ ಮಾಡಿ ಪ್ರೇಕ್ಷಕರನ್ನು ರಂಜಿಸಿದದರು. ಕಳೆದೆರಡು ಪಂದ್ಯಕ್ಕೂ ಮಳೆ ಭೀತಿಯಿತ್ತಾದರೂ, ಪಂದ್ಯ ನಡೆದಿತ್ತು. ಆದರೆ ಈ ಬಾರಿ ಸಂಪೂರ್ಣವಾಗಿ ರದ್ದಾಗಿ ಪ್ರೇಕ್ಷಕರಿಗೆ ನಿರಾಸೆಯಾಗಿತ್ತು.