ಗಾಲೆಯಲ್ಲಿ ಗೆಲುವು ಸಾಧಿಸಿದರೂ ನಾಯಕ ಕೊಹ್ಲಿಗೆ ತಪ್ಪದ ಈ ದೊಡ್ಡ ತಲೆನೋವು

ಭಾನುವಾರ, 30 ಜುಲೈ 2017 (08:37 IST)
ಕೊಲೊಂಬೋ: ಶ್ರೀಲಂಕಾ ವಿರುದ್ಧ ಪ್ರಥಮ ಟೆಸ್ಟ್ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಈಗ ಹೊಸದೊಂದು ತಲೆನೋವು ಶುರುವಾಗಿದೆ.


 
ಅದೇನದು? ಮುಂದಿನ ಟೆಸ್ಟ್ ಪಂದ್ಯ ಆಗಸ್ಟ್ 3 ರಿಂದ ಕೊಲೊಂಬೋದಲ್ಲಿ ಪ್ರಾರಂಭವಾಗಲಿದೆ. ಆ ಟೆಸ್ಟ್ ಪಂದ್ಯಕ್ಕೆ ಯಾರು ಆರಂಭಿಕರು ಎನ್ನುವುದೇ ಕೊಹ್ಲಿಗೆ ಇರುವ ದೊಡ್ಡ ತಲೆನೋವಂತೆ.

ಯಾಕೆಂದರೆ ಸ್ಥಿರ ಆರಂಭಿಕ ಕೆಎಲ್ ರಾಹುಲ್ ಗಾಯಗೊಂಡಿದ್ದರಿಂದ ಶಿಖರ್ ಧವನ್ ಈ ಪಂದ್ಯದಲ್ಲಿ ಆಡಿದ್ದರು. ಅವರು ಸುಮ್ಮನೇ ಆಡಲಿಲ್ಲ. ಭರ್ಜರಿ ಶತಕವನ್ನೇ ದಾಖಲಿಸಿ ಪ್ರಥಮ ಟೆಸ್ಟ್ ನ ಪಂದ್ಯ ಪುರುಷರಾದರು.

ಇನ್ನೊಬ್ಬ ಆರಂಭಿಕ ಅಭಿನವ್ ಮುಕುಂದ್ ಮೊದಲ ಇನಿಂಗ್ಸ್ ನಲ್ಲಿ ಆಡದಿದ್ದರೂ ದ್ವಿತೀಯ ಇನಿಂಗ್ಸ್ ನಲ್ಲಿ ಸ್ವಲ್ಪದರಲ್ಲೇ ಶತಕ ತಪ್ಪಿಸಿಕೊಂಡರು. ರಾಹುಲ್ ಈಗಾಗಲೇ ಚೇತರಿಸಿಕೊಂಡು ತಂಡವನ್ನು ಕೂಡಿಕೊಂಡಿದ್ದಾರೆ.

ಹಾಗಾಗಿ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಆರಂಭಿಕ ಸ್ಥಾನಕ್ಕೆ ಮೂವರಲ್ಲಿ ಯಾರು ಹಿತವರು ಎಂದು ಆರಿಸುವ ಸಿಹಿಯಾದ ತಲೆನೋವು ಎದುರಾಗಿದೆ ಎಂಬುದನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ.. ಮಧುಮೇಹಿಗಳಿಗಾಗಿ ಈ ಹಣ್ಣುಗಳು

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ