ಮದುವೆಯಾದ ಬೆನ್ನಲ್ಲೇ ಕೊಹ್ಲಿಗೆ ಬಿಸಿಸಿಐನಿಂದ ಹಣದ ಹೊಳೆ!

ಶುಕ್ರವಾರ, 15 ಡಿಸೆಂಬರ್ 2017 (11:43 IST)
ಮುಂಬೈ: ಇತ್ತೀಚೆಗಷ್ಟೇ ವಿವಾಹವಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಬಿಸಿಸಿಐ ಬಂಪರ್ ಗಿಫ್ಟ್ ನೀಡಲಿದೆ ಎನ್ನಲಾಗಿದೆ.
 

ವೇತನ ಹೆಚ್ಚಿಸುವಂತೆ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಇತ್ತೀಚೆಗೆ ಸುಪ್ರೀಂಕೋರ್ಟ್ ನೇಮಿಸಿದ ಆಡಳಿತ ಮಂಡಳಿ ಎದುರು ಪ್ರಸ್ತಾಪವಿಟ್ಟಿದ್ದರು. ಅದನ್ನು ಆಡಳಿತ ಮಂಡಳಿ ಬಿಸಿಸಿಐ ಮುಂದಿಟ್ಟಿದ್ದು, ಕ್ರಿಕೆಟಿಗರ ವೇತನಕ್ಕೆಂದೇ ಪ್ರಸಕ್ತ ಮೀಸಲಿರಿಸಿರುವ ಹಣವನ್ನು 180 ಕೋಟಿ ರೂ.ನಿಂದ 380 ಕೋಟಿ ರೂ. ಗೆ ಹೆಚ್ಚಿಸಲು ಸಲಹೆ ನೀಡಿದ್ದರು.

ಇದನ್ನು ಬಿಸಿಸಿಐ ಸಾಮಾನ್ಯ ಸಭೆ ಅನುಮೋದಿಸಿದರೆ ವಿರಾಟ್ ಕೊಹ್ಲಿ ವೇತನ ದುಪ್ಪಟ್ಟಾಗಲಿದೆ.  ಈ ವರ್ಷ ವಿರಾಟ್ ಸುಮಾರು 5.5 ಕೋಟಿ ರೂ. ವೇತನ ಜೇಬಿಗಿಳಿಸಿದ್ದರು. ಒಂದು ವೇಳೆ ಬಿಸಿಸಿಐ ಸಾಮಾನ್ಯ ಮಂಡಳಿ ಒಪ್ಪಿದರೆ ಕೊಹ್ಲಿ ವೇತನ ದುಪ್ಪಟ್ಟು ಅಂದರೆ 10 ಕೋಟಿ ರೂ.ಗೆ ಏರಿಕೆಯಾಗುವ ನಿರೀಕ್ಷೆಯಿದೆ.

ಕೊಹ್ಲಿ ಜತೆಗೆ ಇತರ ಕ್ರಿಕೆಟಿಗರ ವೇತನವೂ ಹೆಚ್ಚಳವಾಗುವ ಸಾಧ್ಯತೆಯಿದೆ. ಭಾರತ ಎ ತಂಡ, ದೇಶೀಯ ಕ್ರಿಕೆಟಿಗರು, ಮಹಿಳಾ ಕ್ರಿಕೆಟಿಗರು ಎಲ್ಲರೂ ಈ ವೇತನ ಹೆಚ್ಚಳದ ಲಾಭ ಪಡೆಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ