ಅಮ್ಮ, ಗೆಳತಿ ಅನುಷ್ಕಾ ಶರ್ಮಾಗೆ ವಿರಾಟ್ ಕೊಹ್ಲಿ ನೀಡಿದ ಭಾವನಾತ್ಮಕ ಸಂದೇಶವಿದು!

ಬುಧವಾರ, 8 ಮಾರ್ಚ್ 2017 (11:39 IST)
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಗೆದ್ದ ಖುಷಿಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಹಿಳಾ ದಿನಾಚರಣೆ ನಿಮಿತ್ತ ಅಮ್ಮ ಸರೋಜ ಮತ್ತು ಗೆಳತಿ ಅನುಷ್ಕಾ ಶರ್ಮಾಗೆ ಭಾವನಾತ್ಮಕ ಸಂದೇಶ ನೀಡಿದ್ದಾರೆ.

 
ತನ್ನ ಜೀವನದ ಎರಡು ಶಕ್ತಿಗಳು ಇವರು ಎಂದು ಕೊಹ್ಲಿ ಉಲ್ಲೇಖಿಸಿದ್ದಾರೆ.  “ಎಲ್ಲಾ ಮಹಿಳೆಯರಿಗೂ ಮಹಿಳಾ ದಿನದ ಶುಭಾಷಯಗಳು. ಅದರಲ್ಲೂ ವಿಶೇಷವಾಗಿ ನನ್ನ ಜೀವನದ ಇಬ್ಬರು ಶಕ್ತಿಯುತ ಮಹಿಳೆಯರಿಗೆ. ಕಷ್ಟದ ಸಂದರ್ಭದಲ್ಲೂ ಕುಟುಂಬ ನಡೆಸಿದ ನನ್ನ ಅಮ್ಮನಿಗೆ ಮತ್ತು ಎಲ್ಲಾ ಅಡೆತಡೆಗಳನ್ನು ಎದುರಿಸಿ ನಿಲ್ಲುವ ಅನುಷ್ಕಾಗೆ” ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಕೊಹ್ಲಿ ಹಾಗೂ ಅನುಷ್ಕಾ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರೂ ತಾವು ಪ್ರೇಮಿಗಳು ಎಂದು ಅಧಿಕೃತವಾಗಿ ಘೋಷಿಸಿಕೊಳ್ಳದಿದ್ದರೂ, ಕಳೆದ ಪ್ರೇಮಿಗಳ ದಿನದಂದು ಕೊಹ್ಲಿ ಬಹಿರಂಗವಾಗಿಯೇ ತಮ್ಮ ಪ್ರೇಮ ನಿವೇದಿಸಿ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ