ವಿರಾಟ್ ಕೊಹ್ಲಿಗೆ ಸಿಕ್ತು ದುಬಾರಿ ಗಿಫ್ಟ್!

ಶನಿವಾರ, 13 ಮೇ 2017 (09:52 IST)
ಮುಂಬೈ: ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಅಂತಹದ್ದೇನೂ ಸಾಧನೆ ಮಾಡಿರಲಿಕ್ಕಿಲ್ಲ. ಆದರೇನಂತೆ? ಕೊಹ್ಲಿ ಆರಾಧಕರಿಗೆ ಏನೂ ಕಮ್ಮಿಯಾಗಿಲ್ಲ. ಹಾಗಾಗಿಯೇ ಕೊಹ್ಲಿಗೆ ಒಂದು ದುಬಾರಿ ಗಿಫ್ಟ್ ಸಿಕ್ಕಿದೆ. ಏನದು?

 
ಇಂದಿನ ಯುವ ಜನರ ಕನಸಿನ ಕಾರು ಆಡಿ 7. ವಿರಾಟ್ ಗೆ ಜರ್ಮನಿಯ ಕಾರು ತಯಾರಕ ಸಂಸ್ಥೆ ತನ್ನ ಆಡಿ ಕ್ಯು7 ಕಾರನ್ನು ಉಡುಗೊರೆಯಾಗಿ ನೀಡಿದೆ. ಆಡಿ ಇಂಡಿಯಾದ ಮುಖ್ಯಸ್ಥೆ ರಾಹಿಲ್ ವಿರಾಟ್ ಗೆ ಕಾರು ಹಸ್ತಾಂತರಿಸಿದ್ದಾರೆ.

ಇದರೊಂದಿಗೆ ಕೊಹ್ಲಿ ಆಡಿ ಕಾರು ತಯಾರಕ ಸಂಸ್ಥೆಯ ಭಾಗವಾಗಿದ್ದಾರೆ. ಈ ಬಗ್ಗೆ ಸ್ವತಃ ಕೊಹ್ಲಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಫೋಟೋ ಸಹಿತ ಪ್ರಕಟಿಸಿದ್ದಾರೆ. ಅಲ್ಲದೆ ಕಾರು ನೀಡಿದ ಸಂಸ್ಥೆಗೆ ಧನ್ಯವಾದ ಅರ್ಪಿಸಿದ್ದಾರೆ.

ಈ ಕಾರಿನ ಬೆಲೆ 72 ಲಕ್ಷ ರೂ.ಗಳಿರುತ್ತವೆ.  2015 ರಲ್ಲಿ ಈ ಮಾಡೆಲ್ ಬಿಡುಗಡೆಯಾಗಿತ್ತು. ಇದೀಗ ಇದರಲ್ಲಿ ಸವಾರಿ ಮಾಡಲು ಉತ್ಸುಕರಾಗಿರುವುದಾಗಿ ಕೊಹ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ