ಮೊದಲ ಚುಂಬನದಲ್ಲೇ ದಂತಭಗ್ನವಾಗಿದ್ದಕ್ಕೆ ವಿರಾಟ್ ಕೊಹ್ಲಿಗೆ ಬೇಸರ

ಶುಕ್ರವಾರ, 27 ಜನವರಿ 2017 (09:52 IST)
ಕಾನ್ಪುರ: ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ, ಮೊದಲ ಬಾರಿಗೆ ಏಕದಿನ ಪಂದ್ಯದಲ್ಲಿ ನಾಯಕರಾಗಿ ಟೀಂ ಇಂಡಿಯಾವನ್ನು ಮುನ್ನಡೆಸಿದಾಗ ವಿರಾಟ್ ಕೊಹ್ಲಿಗೆ ಸೋಲಾಗಿರಲಿಲ್ಲ. ಆದರೆ ಮೊದಲ ಬಾರಿಗೆ ಟಿ-ಟ್ವೆಂಟಿ ಪಂದ್ಯದಲ್ಲೂ ನಾಯಕರಾಗಿ ವಿಜಯಿಯಾಗುವ ಅವರ ಕನಸು ಭಗ್ನವಾಗಿದ್ದಕ್ಕೆ ಬೇಸರವಾಗಿದೆಯಂತೆ.
 

ಧೋನಿ, ಅಜಿಂಕ್ಯಾ ರೆಹಾನೆ ಇವರೆಲ್ಲಾ ಇದುವರೆಗೆ ಭಾರತ ತಂಡವನ್ನು ಟಿ-ಟ್ವೆಂಟಿ ಪಂದ್ಯದಲ್ಲಿ ಮುನ್ನಡೆಸಿ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿದ ಕೀರ್ತಿಗೆ ಪಾತ್ರರಾದವರು. ಆದರೆ ಕೊಹ್ಲಿಗೆ ಮಾತ್ರ ಈ ಭಾಗ್ಯವಿಲ್ಲ. “ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲದರಲ್ಲೂ ಅವರು ನಮಗಿಂತ ಚೆನ್ನಾಗಿ ಆಡಿದರು. ನಾವು 30-40 ರನ್ ಇನ್ನೂ ಹೆಚ್ಚು ಗಳಿಸಬೇಕಿತ್ತು” ಎಂದು ಪಂದ್ಯದ ನಂತರ ಕೊಹ್ಲಿ ಹೇಳಿಕೊಂಡಿದ್ದಾರೆ.

ನಾವು ಹಿರಿಯ ಆಟಗಾರರೇ ಈ ಸೋಲಿನ ಜವಾಬ್ದಾರಿ ಹೊತ್ತುಕೊಳ್ಳುತ್ತೇವೆ. ಯುವ ಬೌಲರ್ ಗಳಾದ ಯಜುವೇಂದ್ರ ಚಾಹಲ್ ಹೊಸ ಚೆಂಡಿನೊಂದಿಗೆ ಉತ್ತಮವಾಗಿ ಬಾಲ್ ಮಾಡಿದರು. ನಾವು ಆಗಾಗ ವಿಕೆಟ್ ಕಿತ್ತು ಜತೆಯಾಟ ಆಗದಂತೆ ನೋಡಿಕೊಳ್ಳಬೇಕಿತ್ತು. ಬ್ಯಾಟಿಂಗ್ ಮಾಡುವಾಗ ವಿಶೇಷವಾಗಿ ನಾನು ಉತ್ತಮ ಜತೆಯಾಟವಾಡಬೇಕಿತ್ತು ಎಂದು ಕೊಹ್ಲಿ ಬೇಸರದಲ್ಲೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ