ಕಿಂಗ್ಸ್ ಇಲೆವೆನ್ ಪಂಜಾಬ್ ಕ್ರಿಕೆಟಿಗನ ಹೊಗಳಿದ ವಿರಾಟ್ ಕೊಹ್ಲಿ

ಬುಧವಾರ, 28 ಅಕ್ಟೋಬರ್ 2020 (10:53 IST)
ದುಬೈ: ತಂದೆಯ ಸಾವಿನ ನಂತರವೂ ವೈಯಕ್ತಿಕ ದುಃಖವನ್ನು ಬದಿಗಿಟ್ಟು ತಂಡಕ್ಕಾಗಿ ಆಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ರಿಕೆಟಿಗ ಮನ್ ದೀಪ್ ಸಿಂಗ್ ಬಗ್ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಿಪಡಿಸಿದ್ದಾರೆ.


ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮನ್ ದೀಪ್ ಬಗ್ಗೆ ವಿಶೇಷವಾಗಿ ಕೊಹ್ಲಿ ಹೊಗಳಿದ್ದಾರೆ. ‘ನಾನು ನೋಡಿದ ಅತ್ಯಂತ ಪ್ರಾಮಾಣಿಕ ಆಟಗಾರ. ಜೀವನದ ಬಗ್ಗೆ ನಿನಗಿರುವ ಸಕಾರಾತ್ಮಕ ದೃಷ್ಟಿಯಿಂದಾಗಿಯೇ ಇಂತಹ ಕಷ್ಟದ ಸಂದರ್ಭದಲ್ಲಿಯೂ ಆಡಲು ಸಾಧ್ಯವಾಯಿತು. ಅವರ ಆಶೀರ್ವಾದ ಸದಾ ನಿನ್ನ ಮೇಲಿರಲಿದೆ’ ಎಂದು ಕೊಹ್ಲಿ ಮನ್ ದೀಪ್ ರನ್ನು ಕೊಂಡಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ