ನೀನೇ ಮುಂದೆ ನಡೆ ಎಂದು ಅಜಿಂಕ್ಯಾ ರೆಹಾನೆಗೆ ಸ್ಥಾನ ಬಿಟ್ಟುಕೊಟ್ಟ ವಿರಾಟ್ ಕೊಹ್ಲಿ

ಮಂಗಳವಾರ, 28 ಮಾರ್ಚ್ 2017 (11:40 IST)
ಧರ್ಮಶಾಲಾ: ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಅಜಿಂಕ್ಯಾ ರೆಹಾನೆ ಕೊನೆಯ ಟೆಸ್ಟ್ ಪಂದ್ಯಕ್ಕೆ ಮಾತ್ರ ನಾಯಕನಾಗಿದ್ದಿರಬಹುದು. ಆದರೆ ನಿರ್ಣಾಯಕ ಪಂದ್ಯದಲ್ಲಿ ಗೆಲುವು ಕೊಡಿಸಿದ ಹಂಗಾಮಿ ನಾಯಕನಿಗೆ ನಾಯಕ ವಿರಾಟ್ ಕೊಹ್ಲಿ ತಕ್ಕ ಗೌರವ ನೀಡಿದ್ದಾರೆ.

 

ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಭಾರತ ತಂಡ ಮೈದಾನಕ್ಕಿಳಿಯುತ್ತಿದ್ದಂತೆ, ತಂಡದ ಮುಂದಿದ್ದ ಕೊಹ್ಲಿ ಹಿಂದೆ ಸರಿದು, ರೆಹಾನೆಗೆ ತಂಡವನ್ನು ಮುನ್ನಡೆಸುವಂತೆ ಕೇಳಿಕೊಂಡರು. ಕೊಹ್ಲಿಯ ಈ ನಡವಳಿಕೆ, ನೆರೆದಿದ್ದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

 
ಟ್ರೋಫಿ ಸ್ವೀಕರಿಸುವ ವೇಳೆ ನಾಯಕನಾಗಿ ರೆಹಾನೆ ಮಾತನಾಡಿದರು.  ಅಲ್ಲದೆ ಪ್ರಶಸ್ತಿ ಸ್ವೀಕರಿಸಲೂ ಹಿಂಜರಿದ ಕೊಹ್ಲಿ, ಕೊನೆಗೆ ರೆಹಾನೆ ಜತೆ ಟ್ರೋಫಿ ಎತ್ತಿ ಹಿಡಿದರು. ಅಲ್ಲದೆ, ನಂತರ ರೆಹಾನೆಗೆ ಟ್ರೋಫಿ ಹಸ್ತಾಂತರಿಸಿ ತಂಡಕ್ಕೆ ನೀಡುವಂತೆ ಹೇಳಿದರಲ್ಲದೆ, ಫೋಟೋಗೆ ಪೋಸ್ ಕೊಡುವಾಗ ತಾವು ಹಿಂದೇ ಉಳಿದುಕೊಂಡರು.

 
ಈ ಸರಣಿಯಲ್ಲಿ 25 ವಿಕೆಟ್ ಹಾಗೂ 2 ಅರ್ಧಶತಕ ಹಾಗೂ ಈ ಪಂದ್ಯದಲ್ಲಿ ಆಲ್ ರೌಂಡರ್ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ವೇಳೆ ಮಾತನಾಡಿದ ಅವರು ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಜತೆ ಜಗಳವಾಡಿದ್ದೇ ತನ್ನ ಯಶಸ್ಸಿಗೆ ಕಾರಣವಾಯಿತು ಎಂದರು!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ