ಗುವಾಹಟಿಯಲ್ಲಿ ಯುವ ಅಭಿಮಾನಿಗಳ ಭೇಟಿ ಮಾಡಿದ ವಿರಾಟ್ ಕೊಹ್ಲಿ

ಭಾನುವಾರ, 2 ಅಕ್ಟೋಬರ್ 2022 (10:10 IST)
ಗುವಾಹಟಿ: ದ.ಆಫ್ರಿಕಾ ವಿರುದ್ಧ ಎರಡನೇ ಟಿ20 ಪಂದ್ಯವಾಡಲು ಗುವಾಹಟಿಗೆ ಬಂದಿಳಿದಿರುವ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಯಂಗ್ ಫ್ಯಾನ್ಸ್ ಜೊತೆ ಕಾಲ ಕಳೆದಿದ್ದಾರೆ.

ಅಭ್ಯಾಸ ನಡೆಸುವಾಗ ತಮ್ಮ ಮೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ನೋಡಲೆಂದೇ ನೂರಾರು ಬಾಲಕರು ಆಗಮಿಸಿದ್ದರು. ಇವರೆನ್ನಲ್ಲಾ ಭೇಟಿಯಾಗಿರುವ ಕೊಹ್ಲಿ ಅವರ ಜೊತೆಗೆ ಸೆಲ್ಫೀಗೂ ಪೋಸ್ ನೀಡಿ ಖುಷಿ ಕೊಟ್ಟಿದ್ದಾರೆ.

ಕೊಹ್ಲಿ ಎಲ್ಲೇ ಹೋದರೂ ಮೈದಾನದಲ್ಲಿ ಅವರನ್ನು ನೋಡಲೆಂದೇ ಅಭಿಮಾನಿಗಳು ಬರುತ್ತಾರೆ. ಅವರು ಬೌಂಡರಿ ಗೆರೆ ಬಳಿಕ ಫೀಲ್ಡಿಂಗ್ ಮಾಡುತ್ತಿದ್ದರಂತೂ ಕೊಹ್ಲಿ ಎಂದು ಕೂಗಿ ಕರೆದು ಮಾತನಾಡಿಸುತ್ತಲೇ ಇರುತ್ತಾರೆ. ಅಭಿಮಾನಿಗಳಿಗೂ ಕೊಹ್ಲಿ ಪ್ರತಿಕ್ರಿಯೆ ನೀಡುವ ಮೂಲಕ ಖುಷಿಕೊಡುತ್ತಾರೆ.
-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ