ಪಂದ್ಯದ ನಡುವೆ ಪೆವಿಲಿಯನ್ ಮರಳಿ ಶಾಕ್ ಕೊಟ್ಟ ವಿರಾಟ್ ಕೊಹ್ಲಿ!
ಈ ಬಗ್ಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ ‘ಬ್ಯಾಟಿಂಗ್ ಮಾಡುವಾಗಲೇ ನನಗೆ ಪೃಷ್ಠದ ಭಾಗಕ್ಕೆ ಗಾಯವಾಗಿತ್ತು. ಆದರೆ ಕಿಬ್ಬೊಟ್ಟೆಗೆ ಬಲವಾದ ಏಟು ಬಿದ್ದಿರಲಿಲ್ಲ. ಫೀಲ್ಡಿಂಗ್ ಮಾಡುವಾಗ ಮತ್ತೆ ನೋವು ಕಾಣಿಸಿಕೊಂಡಿತು. ಹೆಚ್ಚು ರಿಸ್ಕ್ ತೆಗೆದುಕೊಂಡು ಮಾಂಸಖಂಡಕ್ಕೆ ಏಟು ಮಾಡಿಕೊಳ್ಳುವ ಬದಲು ಚಿಕಿತ್ಸೆ ಪಡೆಯಲು ಬಯಸಿದೆ. ಅದಕ್ಕೆ ಪೆವಿಲಿಯನ್ ಗೆ ಮರಳಿದ್ದೆ’ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.