ಜಹೀರ್ ಖಾನ್ ನಿಶ್ಚಿತಾರ್ಥದಲ್ಲಿ ವಿರಾಟ್ ಕೊಹ್ಲಿ ಗಮನೆ ಸೆಳೆದಿದ್ದೇಕೆ?!

ಬುಧವಾರ, 24 ಮೇ 2017 (10:56 IST)
ಮುಂಬೈ: ಕ್ರಿಕೆಟಿಗ ಜಹೀರ್ ಖಾನ್ ಮತ್ತು ನಟಿ ಸಾಗರಿಕಾ ಘೋಷ್ ವಿವಾಹ ನಿಶ್ಚಿತಾರ್ಥ ನಿನ್ನೆ ನೆರವೇರಿತು. ಆದರೆ ಈ ಕಾರ್ಯಕ್ರಮಕ್ಕೆ ಬಂದಿದ್ದ ವಿರಾಟ್ ಕೊಹ್ಲಿ-ಅನುಷ್ಕಾ ಜೋಡಿ ವಿಶೇಷವಾಗಿ ಗಮನ ಸೆಳೆದರು.

 
ಕಪ್ಪು-ಬಿಳುಪು ಬಣ್ಣದ ಉಡುಗೆಯಲ್ಲಿ ಬಂದಿದ್ದ ವಿರಾಟ್- ಅನುಷ್ಕಾ ಹೊರಗಡೆ ನೆರೆದಿದ್ದ ಫೋಟೋಗ್ರಾಫರ್ ಗಳ ಕರೆ ಕಣ್ಣೆತ್ತಿಯೂ ನೋಡುವ ಗೋಜಿಗೆ ಹೋಗಲಿಲ್ಲ. ಒಮ್ಮೆಯಾದರೂ, ವಿರಾಟ್ ತಮ್ಮ ಕಡೆಗೆ ನೋಡಿ ಸ್ಮೈಲ್ ಮಾಡಿಯಾರು ಎಂದು ಕಾಯುತ್ತಿದ್ದ ಫೋಟೋಗ್ರಾಫರ್ ಗಳು ನಿರಾಸೆ ಮೂಡಿಸಿದರು.

ಇಬ್ಬರೂ ಅದೇನನ್ನೋ ಗಹನವಾಗಿ ಚರ್ಚಿಸುತ್ತಾ ಒಳ ಹೋಗಿಯೇ ಬಿಟ್ಟರು. ಇವರಲ್ಲದೆ, ಜಹೀರ್ ನಿಶ್ಚಿತಾರ್ಥಕ್ಕೆ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್,  ರೋಹಿತ್ ಶರ್ಮಾ,  ಮಂದಿರಾ ಬೇಡಿ, ರವೀನಾ ಠಂಡನ್,  ಬಾಬ್ಬಿ ಡಿಯೋಲ್ ಮುಂತಾ ಗಣ್ಯರು ಆಗಮಿಸಿ ಭಾವೀ ಜೋಡಿಗೆ ಶುಭ ಹಾರೈಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ