ಕತೆ ಇಷ್ಟಕ್ಕೇ ಮುಗಿದಿಲ್ಲ! ಆಸೀಸ್ ಗೆ ವಿರಾಟ್ ಕೊಹ್ಲಿ ಎಚ್ಚರಿಕೆ ಕೊಟ್ಟಿದ್ದೇಕೆ?!
ಅಸಲಿಗೆ ಕೊಹ್ಲಿ ಹೀಗೆ ಹೇಳಿದ್ದು, ಮುಂದಿನ ಪಂದ್ಯವನ್ನೂ ಮೊದಲಿನಷ್ಟೇ ಮಹತ್ವ ತೆಗೆದುಕೊಂಡು ಆಡುತ್ತೇವೆ ಎಂದು. ನಮ್ಮ ಎಲ್ಲಾ 15 ಆಟಗಾರರಿಗೂ ಒಂದೇ ಸಂದೇಶ ನೀಡಲಾಗಿದೆ. ಯಾರನ್ನೇ ಆಯ್ಕೆ ಮಾಡಿದರೂ ಮೈದಾನಕ್ಕಿಳಿದ ತಕ್ಷಣ ಎದುರಾಳಿಗಳ ಮೇಲೆ ಕರುಣೆಯಿಲ್ಲದೇ ಮುನ್ನುಗ್ಗು ಎಂದು ಸೂಚನೆ ಕೊಡಲಾಗಿದೆ. ಹಾಗಾಗಿ ಮುಂದಿನ ಪಂದ್ಯವನ್ನೂ ಹಗುರವಾಗಿ ಕಾಣುವಂತೇ ಇಲ್ಲ ಎಂದು ಕೊಹ್ಲಿ ಹೇಳಿದ್ದಾರೆ.