ವಿರಾಟ್ ಕೊಹ್ಲಿ ಈಗ ಡ್ರಿಂಕ್ಸ್ ಮ್ಯಾನ್!

ಶನಿವಾರ, 25 ಮಾರ್ಚ್ 2017 (14:16 IST)
ಧರ್ಮಶಾಲಾ: ಭುಜದ ಗಾಯದಿಂದಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ನಿಂದ ಹೊರಗುಳಿದಿದ್ದಾರೆ. ಆದರೆ ಅವರಿಗೆ ಹೊಸದೊಂದು ಜವಾಬ್ದಾರಿ ವಹಿಸಲಾಗಿದೆ. ಅದು ಡ್ರಿಂಕ್ಸ್ ಪೂರೈಸುವ ಕೆಲಸ!


 
ಆಡುವ ಬಳಗದಿಂದ ಹೊರಗುಳಿದಿರುವ ಕೊಹ್ಲಿ, ಮೈದಾನದಲ್ಲಿರುವ ಆಟಗಾರರಿಗೆ ಪಾನೀಯ ವಿತರಿಸುವ ಕೆಲಸ ಮಾಡಿ ಎಲ್ಲರನ್ನು ಅಚ್ಚರಿಗೆ ದೂಡಿದರು. ಆದರೆ ಇದೇ ಸಮಯವನ್ನು ಸದುಪಯೋಗ ಪಡಿಸಿಕೊಂಡ ಅವರು ತಂಡದ ಆಟಗಾರರೊಂದಿಗೆ ಮಾತುಕತೆಯನ್ನೂ ನಡೆಸಿದರು.

 
ಕೊಹ್ಲಿ ಬದಲಿಗೆ ಈ ಪಂದ್ಯದಲ್ಲಿ ಅಜಿಂಕ್ಯಾ ರೆಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೊಹ್ಲಿ ಬದಲಿಗೆ ಕಣಕ್ಕಿಳಿದಿರುವ ಕುಲ್ ದೀಪ್ ಯಾದವ್ ಆಸೀಸ್ ನ ಪ್ರಮುಖ ಮೂರು ವಿಕೆಟ್ ಕಿತ್ತು ಗಮನ ಸೆಳೆದಿದ್ದಾರೆ. ಚಹಾ ವಿರಾಮಕ್ಕೆ ಆಸ್ಟ್ರೇಲಿಯಾ ಸ್ಕೋರ್ 6 ವಿಕೆಟ್ ನಷ್ಟಕ್ಕೆ 208 ರನ್ ಗಳಾಗಿತ್ತು. ನಾಯಕ ಸ್ಟೀವ್ ಸ್ಮಿತ್ ಶತಕ ಗಳಿಸಿ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ