ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಮತ್ತೊಂದು ವಿವಾದ! ಕೊಹ್ಲಿ ಹೊಸ ಆರೋಪವೇನು?!

ಮಂಗಳವಾರ, 21 ಮಾರ್ಚ್ 2017 (09:36 IST)
ರಾಂಚಿ: ದ್ವಿತೀಯ ಟೆಸ್ಟ್ ಪಂದ್ಯ ಮುಗಿದ ಮೇಲೆ ಡಿಆರ್ ಎಸ್ ವಿವಾದ ಮುಗಿಲು ಮುಟ್ಟಿತ್ತು. ಇದೀಗ ರಾಂಚಿಯಲ್ಲಿ ತೃತೀಯ ಟೆಸ್ಟ್ ಪಂದ್ಯ ಮುಗಿದ ಮೇಲೂ ಹೊಸದೊಂದು ವಿವಾದ ಹುಟ್ಟಿಕೊಳ್ಳುವ ಲಕ್ಷಣ ಕಾಣಿಸುತ್ತಿದೆ.

 

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸೀಸ್ ತಂಡದ ಮೇಲೆ ಹೊಸದೊಂದು ಆರೋಪ ಹೊರಿಸಿದ್ದಾರೆ. “ಅವರು ನಮ್ಮ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ ಹಾರ್ತ್ ಮೇಲೆ ಅಗೌರವ ತೋರಿದ್ದಾರೆ. ಆಸೀಸ್ ನ ನಾಲ್ಕೈದು ಆಟಗಾರರು ಬೇಕೆಂದೇ ಪ್ಯಾಟ್ರಿಕ್ ಹೆಸರು ಕರೆದು ಅಣಕಿಸಿದ್ದಾರೆ. ಯಾಕೆಂದೇ ನನಗೆ ಗೊತ್ತಿಲ್ಲ. ಪ್ಯಾಟ್ರಿಕ್ ಕೆಲಸ ನನಗೆ ಚಿಕಿತ್ಸೆ ಕೊಡಿಸುವುದಷ್ಟೇ ಆಗಿತ್ತು. ಸುಖಾ ಸುಮ್ಮನೇ ನಮ್ಮ ಫಿಸಿಯೋರನ್ನುಅವಮಾನಿಸಿದ್ದಾರೆ” ಎಂದು ಕೊಹ್ಲಿ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.

 
ಆದರೆ ಈ ಆರೋಪವನ್ನು ಆಸೀಸ್ ನಾಯಕ ಸ್ಟೀವ್ ಸ್ಮಿತ್ ಸರಾಸಗಾಟಾಗಿ ತಳ್ಳಿ ಹಾಕಿದ್ದಾರೆ. “ನಾವ್ಯಾಕೆ ಪ್ಯಾಟ್ರಿಕ್ ರನ್ನು ಅಗೌರವದಿಂದ ಕಾಣಲಿ? ಅವರೂ ಕೂಡಾ ಮೂಲತಃ ನಮ್ಮ ದೇಶದವರೇ. ವಿರಾಟ್ ಯಾಕೆ ಈ ರೀತಿಯ ಆರೋಪ ಮಾಡಿದರೋ ಗೊತ್ತಿಲ್ಲ” ಎಂದು ಸ್ಮಿತ್ ಆರೋಪ ನಿರಾಕರಿಸಿದ್ದಾರೆ.

 
ಈ ಪಂದ್ಯದಲ್ಲಿ ಕೊಹ್ಲಿ ಭುಜಕ್ಕೆ ಗಾಯ ಮಾಡಿಕೊಂಡಿದ್ದನ್ನು ಆಸೀಸ್ ಆಟಗಾರರು ಅಣಕಿಸಿದ್ದರು. ಇದರಿಂದಾಗಿ ಮತ್ತೊಮ್ಮೆ ವಿವಾದ ಭಗಿಲೆದ್ದಿತ್ತು. ಈಗ ಕೊಹ್ಲಿ ಹೊಸ ಆರೋಪ ಇನ್ನೆಷ್ಟು ರಾಡಿ ಎಬ್ಬಿಸುತ್ತದೋ ನೋಡಬೇಕು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ