ಬಾಂಗ್ಲಾ ವಿರುದ್ಧ ಪಂದ್ಯ ಮುಗಿದ ಬಳಿಕ ಅಜ್ಜಿಯ ಕಾಲಿಗೆರಗಿದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ

ಬುಧವಾರ, 3 ಜುಲೈ 2019 (09:43 IST)
ಲಂಡನ್: ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ನಡುವೆ ನಿನ್ನೆ ಬರ್ಮಿಂಗ್ ಹ್ಯಾಮ್ ನಲ್ಲಿ ಪಂದ್ಯ ನಡೆಯುವಾಗ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ 87 ವರ್ಷದ ಅಜ್ಜಿ ಎಲ್ಲರ ಗಮನಸೆಳೆಯುತ್ತಿದ್ದರು.


ಈ ಅಜ್ಜಿಯ ಹೆಸರು ಚಾರುಲತಾ ಪಟೇಲ್ ಎನ್ನಲಾಗಿದೆ. ಈ 87 ವರ್ಷದ ಅಜ್ಜಿ ಪಂದ್ಯದುದ್ದಕ್ಕೂ ಪೀಪಿ ಊದುತ್ತಾ ಟೀಂ ಇಂಡಿಯಾ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಈ ಅಜ್ಜಿಯನ್ನು ಆಗಾಗ ಕ್ಯಾಮರಾ ಕಣ್ಣುಗಳು ಸೆರೆಹಿಡಿಯುತ್ತಿತ್ತು.

ಈ ಅಜ್ಜಿಯ ಉತ್ಸಾಹ ಕಂಡು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡಾ ಮನಸೋತಿದ್ದಾರೆ. ಪಂದ್ಯ ಮುಗಿದ ಬಳಿಕ ಅಜ್ಜಿಯನ್ನು ಖುದ್ದಾಗಿ ಭೇಟಿ ಮಾಡಿದ ಈ ಕ್ರಿಕೆಟಿಗರು ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ.

ಈ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿರುವ ವಿರಾಟ್ ಕೊಹ್ಲಿ ವಯಸ್ಸು ಒಂದು ಸಂಖ್ಯೆಯಷ್ಟೇ. ನಾನು ನೋಡಿದ ಅತ್ಯಂತ ಸಮರ್ಪಣಾ ಮನೋಭಾವದ ಅಭಿಮಾನಿ. ಆಕೆಯ ಆಶೀರ್ವಾದದೊಂದಿಗೆ ಮುಂದಿನ ಪಂದ್ಯವನ್ನು ಎದುರಿಸುವೆವು ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ