ವಿರಾಟ್ ಕೊಹ್ಲಿ, ತಮನ್ನಾ ಭಾಟಿಯಾಗೆ ಹೈಕೋರ್ಟ್ ನೋಟಿಸ್

ಬುಧವಾರ, 27 ಜನವರಿ 2021 (17:00 IST)
ತಿರುವನಂತಪುರಂ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ತಮನ್ನಾ ಭಾಟಿಯಾ ಹಾಗೂ ಮಲಯಾಳಂ ನಟ ಅಜು ವರ್ಗೀಸ್ ಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿದೆ.


ಕೊಹ್ಲಿ, ತಮನ್ನಾ ಹಾಗೂ ಅಜು ವರ್ಗೀಸ್ ಆನ್ ಲೈನ್ ಜೂಜಿನಾಟ ಪ್ರಮೋಟ್ ಮಾಡುವ ಜಾಹೀರಾತುಗಳಲ್ಲಿ ನಟಿಸಿರುವುದನ್ನು ಪ್ರಶ್ನಿಸಿ ನೋಟಿಸ್ ನೀಡಲಾಗಿದೆ. ತ್ರಿಶ್ಶೂರ್ ಪೊಲೀಸರು ಈ ಸಂಬಂಧ ಕೇರಳ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದರು. ಈ ಸಂಬಂಧ ತಾರೆಯರ ವಿವರಣೆ ಕೋರಿ ನೋಟಿಸ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ