ಮುಂಬೈ: ಈಗಷ್ಟೇ ಟೀಂ ಇಂಡಿಯಾ ಏಷ್ಯಾ ಕಪ್ ಕ್ರಿಕೆಟ್ ಚಾಂಪಿಯನ್ ಆದ ಖುಷಿಯಲ್ಲಿದೆ. ಇದೀಗ ಮತ್ತೊಂದು ಸರಣಿಗೆ ಇನ್ನೊಂದು ತಂಡ ರೆಡಿಯಾಗುತ್ತಿದೆ. ಟೀಂ ಇಂಡಿಯಾ ಮುಂದಿನ ಮ್ಯಾಚ್ ಯಾರ ಜೊತೆಗೆ ಇಲ್ಲಿದೆ ವೇಳಾಪಟ್ಟಿ.
ಏಷ್ಯಾ ಕಪ್ ನಲ್ಲಿ ಭಾರತದ ಯುವ ಕ್ರಿಕೆಟಿಗರು ಪಾಕಿಸ್ತಾನವನ್ನು ಸೋಲಿಸಿ ದೇಶದ ಕೀರ್ತಿ ಪತಾಕೆ ಮತ್ತೊಮ್ಮೆ ಹಾರಿಸಿದ್ದಾರೆ. ಇದೀಗ ಯುವ ಕ್ರಿಕೆಟಿಗರಿಗೆ ವಿಶ್ರಾಂತಿ ಸಮಯ. ಇದೀಗ ಭಾರತ ಟೆಸ್ಟ್ ಸರಣಿಗೆ ಸಜ್ಜಾಗಲಿದೆ.
ಅಕ್ಟೋಬರ್ 2 ರಿಂದಲೇ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಇದಕ್ಕೆ ಶುಭಮನ್ ಗಿಲ್ ನಾಯಕರಾಗಿದ್ದು 15 ಸದಸ್ಯರ ತಂಡ ಈಗಾಗಲೇ ಪ್ರಕಟವಾಗಿದೆ. ಅಕ್ಟೋಬರ್ 2 ರಿಂದ 6 ರವರೆಗೆ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ಎರಡನೇ ಪಂದ್ಯ ಅಕ್ಟೋಬರ್ 10 ರಿಂದ 14 ರವರೆಗೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ಈ ಎರಡೂ ಪಂದ್ಯಗಳೂ ಭಾರತೀಯ ಕಾಲಮಾನ ಪ್ರಕಾರ ಬೆಳಿಗ್ಗೆ 9.30 ಕ್ಕೆ ಆರಂಭವಾಗಲಿದೆ. ಇದಾದ ಬಳಿಕ ಎಲ್ಲರೂ ನಿರೀಕ್ಷಿಸುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭವಾಗಲಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಕಣಕ್ಕಿಳಿಯಲಿದ್ದಾರೆ.