ಇಂಗ್ಲೆಂಡ್ ಸರಣಿಗೆ ಮೊದಲು ವ್ಯಾಕ್ಸಿನ್ ಪಡೆದುಕೊಂಡ ವಿರಾಟ್ ಕೊಹ್ಲಿ

ಮಂಗಳವಾರ, 11 ಮೇ 2021 (09:28 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮೊದಲು ಕೊರೋನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.


ಮುಂಬೈನಲ್ಲಿ ಕೊರೋನಾ ವ್ಯಾಕ್ಸಿನ್ ಪಡೆದುಕೊಂಡ ಕೊಹ್ಲಿ, ನೀವೂ ಕೊರೋನಾ ಲಸಿಕೆ ಪಡೆದುಕೊಂಡು, ಮಹಾಮಾರಿಯಿಂದ ಸುರಕ್ಷಿತವಾಗಿರಿ ಎಂದು ಸಂದೇಶ ನೀಡಿದ್ದಾರೆ. ಇಶಾಂತ್ ಶರ್ಮಾ ಕೂಡಾ ದೆಹಲಿಯಲ್ಲಿ ಕೊರೋನಾ ಲಸಿಕೆ ಪಡೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ದೆಹಲಿಯಲ್ಲಿ ಕೊರೋನಾ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಈಗ ಕೊಹ್ಲಿ ಸರದಿ. ಉಳಿದ ಕ್ರಿಕೆಟಿಗರೂ ಇಂಗ್ಲೆಂಡ್ ಗೆ ತೆರಳುವ ಮೊದಲು ವ್ಯಾಕ್ಸಿನೇಷನ್ ಗೊಳಗಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ