ಸೈನಿಕರಿಗೆ ವಿರಾಟ್ ಕೊಹ್ಲಿ ಮೆಸೇಜ್

ಶುಕ್ರವಾರ, 28 ಅಕ್ಟೋಬರ್ 2016 (13:27 IST)
ವಿಶಾಖಪಟ್ಟಣ: ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ದೀಪಾವಳಿ ಸಂದರ್ಭದಲ್ಲಿ ಭಾರತೀಯ ಸೈನಿಕರಿಗೆ ಸಂದೇಶ ಕಳುಹಿಸಿದ್ದಾರೆ.

ಟ್ವಿಟರ್ ನಲ್ಲಿ ವಿಡಿಯೋ ಮೂಲಕ ಸಂದೇಶ ಕಳುಹಿಸಿರುವ ಕೊಹ್ಲಿ “ಕುಟುಂಬದವರಿಂದ ದೂರವಿರುವುದು ಎಷ್ಟು ಕಷ್ಟ ಎಂದು ನನಗೆ ಗೊತ್ತು. ನಮ್ಮ ದೇಶವನ್ನು ನೀವು ರಕ್ಷಿಸುತ್ತಿರುವ ಪರಿ ಪ್ರಶಂಸನೀಯ” ಎಂದು ವಿಡಿಯೋ ಸಂದೇಶದಲ್ಲಿ ಕೊಹ್ಲಿ ಹೇಳಿದ್ದಾರೆ.

ಅಲ್ಲದೆ ಸೈನಿಕರನ್ನು ಕಂಡಾಗ ಸಲಾಮು ಹೊಡೆಯಿರಿ. ನಾವು ಹಬ್ಬ ಆಚರಿಸುತ್ತಿರುವುದು ಮತ್ತು ನೆಮ್ಮದಿಯಿಂದ ಜೀವನ ಮಾಡಲು ಸಾಧ್ಯವಾಗುತ್ತಿರುವುದು ಅವರಿಂದಾಗಿಯೇ ಎಂದೂ ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ಕ್ರಿಕೆಟಿಗರ ಪೈಕಿ ವೀರೇಂದ್ರ ಸೆಹ್ವಾಗ್ ಕೂಡಾ ದೀಪಾವಳಿಗೆ ಸೈನಿಕರಿಗೆ ಶುಭ ಕೋರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ