ಚೇಸಿಂಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ

ಶುಕ್ರವಾರ, 7 ಜುಲೈ 2017 (09:01 IST)
ಜಮೈಕಾ: ವೆಸ್ಟ್ ಇಂಡೀಸ್ ವಿರುದ್ಧ ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವುದರೊಂದಿಗೆ ಟೀಂ ಇಂಡಿಯಾ ಸರಣಿ ಗೆದ್ದು ಪ್ರತಿಷ್ಠೆ ಉಳಿಸಿಕೊಂಡಿದೆ. ವಿಶೇಷವಾಗಿ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಸಚಿನ್ ತೆಂಡುಲ್ಕರ್ ಅವರ ದಾಖಲೆಯೊಂದನ್ನು ಮುರಿದರು.


ಚೇಸಿಂಗ್ ವೀರನೆಂದೇ ಹೆಗ್ಗಳಿಕೆ ಹೊಂದಿರುವ ಕೊಹ್ಲಿ, ಈ ಪಂದ್ಯದಲ್ಲೂ ಅದನ್ನು ಸಾಬೀತು ಪಡಿಸಿದರು. ತಮ್ಮ ಏಕದಿನ ಬಾಳ್ವೆಯ 28  ನೇ ಶತಕ ದಾಖಲಿಸಿದ ಕೊಹ್ಲಿ ಚೇಸಿಂಗ್ ಮಾಡುವಾಗ ಅತೀ ಹೆಚ್ಚು ಶತಕ ಗಳಿಸಿದ ತೆಂಡುಲ್ಕರ್ ದಾಖಲೆಯನ್ನು ಅಳಿಸಿದರು. ತೆಂಡುಲ್ಕರ್ ಚೇಸಿಂಗ್ ಮಾಡುವಾಗ 17 ಶತಕ ಗಳಿಸಿದ್ದರು.

ಕೊಹ್ಲಿ ಕೇವಲ 102 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆದರೆ ತೆಂಡುಲ್ಕರ್ ಗೆ 17 ಶತಕ ಗಳಿಸಲು 232 ಇನಿಂಗ್ಸ್ ಬೇಕಾಗಿತ್ತು. 11 ಶತಕ ಗಳಿಸಿದ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಅಂತಿಮವಾಗಿ ಕೊಹ್ಲಿ  ಅಜೇಯ 111 ರನ್ ಗಳಿಸಿದರು.

ಇದನ್ನೂ ಓದಿ.. ಟೀಂ ಇಂಡಿಯಾ ಜತೆ ಆಡುವುದೆಂದರೆ ಪಾಕ್ ಗೆ ನಡುಕವಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ