ನ್ಯಾಯ ಕೊಡಿಸಿ ಎಂದ ವೀರೇಂದ್ರ ಸೆಹ್ವಾಗ್

ಬುಧವಾರ, 9 ಆಗಸ್ಟ್ 2017 (09:26 IST)
ನವದೆಹಲಿ: ದೇಶದ ಯಾವುದೇ ವಿಚಾರಗಳ ಬಗ್ಗೆ ಟ್ವೀಟರ್ ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅಭ್ಯಾಸ. ಇದೀಗ ಹರ್ಯಾಣದಲ್ಲಿ ಬಿಜೆಪಿ ನಾಯಕ ಪುತ್ರನಿಂದ ಅನ್ಯಾಯಕ್ಕೊಳಗಾದ ಮಹಿಳೆ ಪರ ಅವರು ಧ್ವನಿಯೆತ್ತಿದ್ದಾರೆ.

 
ಚಂಡೀಘಡದ ಹೆದ್ದಾರಿಯಲ್ಲಿ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲಾ ಪುತ್ರ ವಿಕಾಸ್ ಬರಾಲಾ ವರ್ಣಿಕಾ ಕುಂಡು ಎಂಬ ಯುವತಿಯ ಕಾರು ಹಿಂಬಾಲಿಸಿದ್ದಲ್ಲದೇ, ಅಪಹರಿಸಲು ಯತ್ನಿಸಿದ್ದ. ಈ ಘಟನೆ ದೇಶದಾದ್ಯಂತ ಸುದ್ದಿಯಾಗಿತ್ತು. ಪ್ರತಿಭಟನೆಗಳು ವ್ಯಕ್ತವಾದ ಮೇಲೆ ವಿಕಾಸ್ ನನ್ನು ಬಂಧಿಸಲಾಗಿತ್ತಾದರೂ, ಕೆಲವೇ ಗಂಟೆಯೊಳಗೆ ಬಿಡುಗಡೆ ಮಾಡಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸೆಹ್ವಾಗ್ ‘ಚಂಢೀಘಡ ಘಟನೆ ನಾಚಿಕೆಗೇಡಿನದ್ದು ಮತ್ತು ಈ ವಿಚಾರವಾಗಿ ನ್ಯಾಯಯುತ ತನಿಖೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ.. ಪಾಕ್ ಬಗ್ಗೆ ಏನೋ ಹೇಳಲು ಹೋಗಿ ಜಾಡಿಸಿಕೊಂಡ ಶೊಯೇಬ್ ಅಖ್ತರ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ