ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿಯನ್ನು ಕಾಡುಪ್ರಾಣಿಗಳಿಗೆ ಹೋಲಿಸಿದ ವೀರೇಂದ್ರ ಸೆಹ್ವಾಗ್!

ಗುರುವಾರ, 19 ಜನವರಿ 2017 (11:45 IST)
ನವದೆಹಲಿ: ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ನೋಡಿ ಇದೀಗ ವಿಶ್ವದಾದ್ಯಂತ ಸಚಿನ್ ತೆಂಡುಲ್ಕರ್ ಗೆ ಹೋಲಿಕೆ ಮಾಡಲು ಶುರು ಮಾಡಿದ್ದಾರೆ. ಆದರೆ ವೀರೇಂದ್ರ  ಸೆಹ್ವಾಗ್ ಈ ವಾದಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಇವರಿಬ್ಬರನ್ನು ಕಾಡು ಪ್ರಾಣಿಗಳಿಗೆ ಹೋಲಿಸಿದ್ದಾರೆ!

 
“ಇಬ್ಬರೂ ಅದ್ಭುತ ಬ್ಯಾಟ್ಸ್ ಮನ್ ಗಳು. ಆದರೆ  ಸಚಿನ್ ಜತೆ ನೀವು ಮೈದಾನಕ್ಕಿಳಿಯುವಾಗ ಸಿಂಹದ ಜತೆ ಕಾಡಿನೊಳಗೆ ಹೋದ ಅನುಭವವಾಗುತ್ತದೆ. ಯಾರಿಗೂ ನಿಮ್ಮನ್ನು ಮುಟ್ಟುವ ಧೈರ್ಯ ಮಾಡುವುದಿಲ್ಲ. ಆದರೆ ಕೊಹ್ಲಿ ನರಿಯಂತೆ. ಅವರಿಗೆ ದಟ್ಟ ಕಾಡಿನೊಳಗೆ ಯಾವ ರೀತಿ ನುಗ್ಗಬೇಕು ಎಂದು ಚೆನ್ನಾಗಿ ಗೊತ್ತು” ಎಂದು ಸೆಹ್ವಾಗ್ ಹೋಲಿಕೆ ಮಾಡಿದ್ದಾರೆ.

“ಸದ್ಯಕ್ಕೆ ನಾನೀಗ ನೋಡುವುದು ಇಬ್ಬರ ಆಟ. ಒಬ್ಬರು ವಿರಾಟ್ ಕೊಹ್ಲಿ, ಇನ್ನೊಬ್ಬರು ಡೇವಿಡ್ ವಾರ್ನರ್. ಅವರನ್ನು ಬಿಟ್ಟರೆ ಯುವ ಕ್ರಿಕೆಟಿಗ ರಿಷಬ್ ಪಂತ್. ಇವರ ಆಟ ಅದ್ಭುತವಾಗಿರುತ್ತದೆ” ಎಂದು ವೀರೂ ಹೇಳಿದ್ದಾರೆ.

ಅಲ್ಲಿಗೆ ಕೊಹ್ಲಿ ಶ್ರೇಷ್ಠ ಕ್ರಿಕೆಟಿಗನಾ? ಸಚಿನ್ ತೆಂಡುಲ್ಕರ್ ಶ್ರೇಷ್ಠರಾ ಎಂಬ ವಾದಕ್ಕೆ ಹೊಸ ಟ್ವಿಸ್ಟ್ ನೀಡಿದ್ದಾರೆ ವೀರೂ. ಯಾರೆಲ್ಲಾ ಹೋಲಿಕೆ ಮಾಡಿದರು. ಆದರೆ ವೀರೂ ಥರಾ ಕಾಡು ಪ್ರಾಣಿಗಳಿಗೆ ಹೋಲಿಸುವ ಧೈರ್ಯ ಯಾರು ಮಾಡಿದ್ದಾರೆ ಹೇಳಿ ನೋಡೋಣ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ