ಟ್ವಿಟರ್ ನಲ್ಲಿ 1 ಕೋಟಿ ಹಿಂಬಾಲಕರನ್ನು ಪಡೆದ ಸೆಹ್ವಾಗ್

ಗುರುವಾರ, 25 ಮೇ 2017 (08:41 IST)
ನವದೆಹಲಿ: ವೀರೇಂದ್ರ ಸೆಹ್ವಾಗ್ ಟ್ವಿಟರ್ ಖಾತೆಯಲ್ಲಿ ಬರೆಯುವ ಸಂದೇಶಗಳು ಭಾರೀ ಹಿಟ್ ಆಗುತ್ತವೆ. ಇದಕ್ಕಾಗಿಯೇ ಸೆಹ್ವಾಗ್ ಗೆ ಟ್ವಿಟರ್ ನಲ್ಲಿ ಹಿಂಬಾಲಕರ ಸಂಖ್ಯೆ 1 ಕೋಟಿ ದಾಟಿದೆ.

 
ಕ್ರಿಕೆಟ್ ವಿಷಯವಿರಲಿ, ರಾಜಕೀಯ ವಿಷಯವಾಗಿರಲಿ ಅಥವಾ ಸೈನಿಕರ ವಿಚಾರವಾಗಲೀ ಧೈರ್ಯವಾಗಿ ವಿಡಂಬನಾತ್ಮಕವಾಗಿ ವಿಮರ್ಶಿಸುವ ಸೆಹ್ವಾಗ್ ಟ್ವೀಟ್ ಗಳನ್ನು ಸಾಕಷ್ಟು ಮಂದಿ ಮೆಚ್ಚಿಕೊಳ್ಳುತ್ತಾರೆ.

ಹೀಗಾಗಿ ಕ್ರಿಕೆಟ್ ನಿಂದ ನಿವೃತ್ತಿ ಪಡೆದರೂ ಸೆಹ್ವಾಗ್ ಜನಪ್ರಿಯರಾಗಿಯೇ ಉಳಿದಿದ್ದರು. ಇತ್ತೀಚೆಗೆ ತಮ್ಮ ತಮಾಷೆಯ ಟ್ವೀಟ್ ಗಳಿಂದಾಗಿಯೇ 30 ಲಕ್ಷ ಆದಾಯ ಗಳಿಸಿದ್ದೇನೆ ಎಂದು ಸೆಹ್ವಾಗ್ ಹೇಳಿಕೊಂಡಿದ್ದನ್ನು ಸ್ಮರಿಸಿಕೊಳ್ಳಬಹುದು. ಅಲ್ಲದೆ, ಹುತಾತ್ಮ ಯೋಧನ ಪುತ್ರಿಯ ವಿಚಾರವಾಗಿ ಟ್ವೀಟ್ ಮಾಡಿದಾಗ ಅವರ ಅಭಿಪ್ರಾಯದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿದ್ದವು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ