ನಿವೃತ್ತಿಯಿಂದ ಹೊರಬಂದು ಆಸ್ಟ್ರೇಲಿಯಾ ಪ್ರವಾಸಕ್ಕೆ ರೆಡಿ ಎಂದ ವೀರೇಂದ್ರ ಸೆಹ್ವಾಗ್!
ಬುಧವಾರ, 13 ಜನವರಿ 2021 (09:46 IST)
ಸಿಡ್ನಿ: ಟೀಂ ಇಂಡಿಯಾದಲ್ಲಿ ಈಗ ಎಲ್ಲರೂ ಗಾಯಾಳುಗಳೇ. ಅಂತಿಮ ಟೆಸ್ಟ್ ಪಂದ್ಯಕ್ಕೆ ಆಡುವ ಬಳಗ ಹೊಂದಿಸುವುದೇ ತಲೆನೋವಿನ ವಿಚಾರ. ಇಂತಹ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬೇಕಿದ್ದರೆ ನಾನು ನಿವೃತ್ತಿಯಿಂದ ಹೊರಬಂದು ಆಡಲು ರೆಡಿ ಎಂದಿದ್ದಾರೆ!
ಆದರೆ ವೀರೂ ಹೀಗೆ ಹೇಳಿರುವುದು ತಮಾಷೆಗಾಗಿ. ಟೀಂ ಇಂಡಿಯಾದ ಗಾಯಾಳು ಆಟಗಾರರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ವೀರೂ ಬೇಕಿದ್ದರೆ ಹೂಂ ಎಂದರೆ ಆಸ್ಟ್ರೇಲಿಯಾಕ್ಕೆ ಹೋಗಲು ನಾನು ರೆಡಿ ಎಂದಿದ್ದಾರೆ. ಸೆಹ್ವಾಗ್ ಈ ರೀತಿ ಪೋಸ್ಟ್ ಹಾಕುತ್ತಿದ್ದಂತೇ ನೆಟ್ಟಿಗರು ವೀರೂ ಪಾಜಿ ನೀವು ಹೋದರೆ ಆಸ್ಟ್ರೇಲಿಯಾ ನಡುಗುವುದು ಗ್ಯಾರಂಟಿ. ಹೋಗಿ ಎಂದು ಬೆಂಬಲಿಸಿದ್ದಾರೆ.