ಪಾಕಿಸ್ತಾನಕ್ಕೆ ಏಟು ಕೊಡುವ ಚಾನ್ಸ್ ವೀರೇಂದ್ರ ಸೆಹ್ವಾಗ್ ಮಿಸ್ ಮಾಡುವುದುಂಟೇ?

ಸೋಮವಾರ, 5 ಡಿಸೆಂಬರ್ 2016 (08:49 IST)
ನವದೆಹಲಿ: ಪಾಕಿಸ್ತಾನ ಕ್ರಿಕೆಟ್ ತಂಡವೆಂದರೆ ಸಾಕು ಭಾರತೀಯ ಕ್ರಿಕೆಟಿಗರ ಕಿವಿ ನೆಟ್ಟಗಾಗುತ್ತದೆ. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡಾ ಇದಕ್ಕೆ ಹೊರತಲ್ಲ. ಪಾಕಿಸ್ತಾನಕ್ಕೆ ತಪರಾಕಿ ನೀಡುವ ಚಾನ್ಸ್ ಅವರು ಎಂದಿಗೂ ಮಿಸ್ ಮಾಡಲ್ಲ.

ಭಾರತದ ಮಹಿಳಾ ಕ್ರಿಕೆಟ್ ತಂಡ ಏಷ್ಯಾ ಕಪ್ ಟಿ-ಟ್ವೆಂಟಿಯಲ್ಲಿ ಪಾಕಿಸ್ತಾನವನ್ನು ಮಣಿಸಿ ಚಾಂಪಿಯನ್ ಆದಾಗಲೂ ಅವರು ಅದೇ ರೀತಿ ಮಾಡಿದ್ದಾರೆ. ಟ್ವಿಟರ್ ವೀರ ವೀರೂ, ತಮ್ಮ ಎಂದಿನ ಭಾಷಾ ಪ್ರಾವಿಣ್ಯತೆಯನ್ನು ತೋರಿಸಿದ್ದು, ಅಭಿನಂದನೆಗಳು ಹುಡುಗಿಯರೇ. ನಿಮ್ಮ ಸಾಧನೆಯಿಂದ ಪಾಕಿಸ್ತಾನಕ್ಕೆ ಅವಕಾಶವೇ ಇಲ್ಲದಂತಾಯಿತು ಎಂದು ಜನಪ್ರಿಯ ಮೌಕಾ ಜಾಹೀರಾತನ್ನು ನೆನಪಿಸಿದ್ದಾರೆ.

ಭಾರತದ ವನಿತೆಯರು ಬ್ಯಾಂಕಾಕ್ ನಲ್ಲಿ ನಡೆದ ಏಷ್ಯಾ ಕಪ್ ಟಿ-ಟ್ವೆಂಟಿ ಚಾಂಪಿಯನ್ಸ್ ಶಿಪ್  ಫೈನಲ್ ನಲ್ಲಿ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಗೆದ್ದಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ