ವಮಿಕಾ ಅರ್ಧವರ್ಷದ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡ ವಿರುಷ್ಕಾ

ಸೋಮವಾರ, 12 ಜುಲೈ 2021 (09:20 IST)
ಲಂಡನ್: ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ತಮ್ಮ ಮುದ್ದಿನ ಮಗಳು ವಮಿಕಾ ಕೊಹ್ಲಿ ಜೊತೆಗಿನ ಸಂತೋಷದ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ವಮಿಕಾಗೆ ನಿನ್ನೆ ಆರು ತಿಂಗಳು ತುಂಬಿದ ಹಿನ್ನಲೆಯಲ್ಲಿ ತಾರಾ ದಂಪತಿ ಆಕೆಯ ಜೊತೆಗೆ ಲಾನ್ ನಲ್ಲಿ ಆಟವಾಡುತ್ತಿರುವ ಸುಂದರ ಕ್ಷಣಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಇದುವರೆಗೆ ಕೊಹ್ಲಿ ದಂಪತಿ ವಮಿಕಾಳ ಫೋಟೋಗಳನ್ನು ಹಂಚಿಕೊಂಡರೂ ಮುಖದರ್ಶನ ಮಾಡಿಸಿಲ್ಲ. ಈ ಸಂದರ್ಭದಲ್ಲಿಯೂ ಆಕೆಯ ಮುಖ ಕಾಣದಂತೆ ಆಟವಾಡುವ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದಾರಷ್ಟೇ. ಜೊತೆಗೆ ಅನುಷ್ಕಾ ನಿನ್ನ ಜೊತೆಗೆ ನಮಗೂ ಆರು ತಿಂಗಳು ತುಂಬಿದಂತಾಗಿದೆ ಎಂದು ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ