ವಿರಾಟ್ ಕೊಹ್ಲಿಯನ್ನು ಅಣಕಿಸಿದ್ದಕ್ಕೆ ವಿವಿಎಸ್ ಲಕ್ಷ್ಮಣ್ ತಪರಾಕಿ

ಭಾನುವಾರ, 19 ಮಾರ್ಚ್ 2017 (09:13 IST)
ರಾಂಚಿ: ವಿರಾಟ್ ಕೊಹ್ಲಿ ಭುಜದ ನೋವಿಗೆ ತುತ್ತಾದುದನ್ನು ಅಣಕಿಸಿದ ಆಸ್ಟ್ರೇಲಿಯಾ ಆಟಗಾರರಿಗೆ ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ತಪರಾಕಿ ನೀಡಿದ್ದಾರೆ.

 

ಕಳೆದ ಪಂದ್ಯದಲ್ಲಿ ಡಿಆರ್ ಎಸ್ ಚೀಟಿಂಗ್ ಪ್ರಕರಣ ನಡೆದ ಮೇಲೆ ಉಭಯ ತಂಡಗಳೂ  ಮಿತಿ ಮೀರಿ ವರ್ತಿಸಬಾರದು ಎಂದು ಎಚ್ಚರಿಕೆ ನೀಡಲಾಗಿತ್ತು. ಹಾಗಿದ್ದೂ, ಗಾಯಗೊಂಡ ಆಟಗಾರನನ್ನು ಅಣಕಿಸುವ ಕೀಳು ಪ್ರವೃತ್ತಿ ತೋರಿಸಿದ ಆಸೀಸ್ ಆಟಗಾರರಿಗೆ ಲಕ್ಷ್ಮಣ್ ತಿರುಗೇಟು ನೀಡಿದ್ದಾರೆ.

 
“ಎದುರಾಳಿ ಆಟಗಾರನೇ ಆದರೂ, ಗಾಯಗೊಂಡಾಗ ಅವರ ಬಗ್ಗೆ ಕಾಳಜಿ ತೋರುತ್ತೇವೆ. ಆದರೆ ಸ್ಟೀವ್ ಸ್ಮಿತ್ ಮತ್ತು ಬಳಗ ಮಾಡಿದ್ದೇನು? ಸ್ಲೆಡ್ಜಿಂಗ್ ಮಾಡುವುದೆಲ್ಲಾ ಸರಿ. ಆದರೆ ಗಾಯಗೊಂಡವರನ್ನು ಅಣಕಿಸುವುದು ಸಭ್ಯತೆಯಲ್ಲ” ಎಂದು ಲಕ್ಷ್ಮಣ್ ಕಿಡಿ ಕಾರಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ