ಎಂಎಸ್ ಧೋನಿಯ ಶ್ರೇಷ್ಟ ಏಕದಿನ ಸ್ಕೋರ್ ಯಾವುದು?

ಗುರುವಾರ, 7 ಜುಲೈ 2016 (17:47 IST)
ಭಾರತದ ಸೀಮಿತ ಓವರುಗಳ ನಾಯಕ ಧೋನಿ ಏಕ ದಿನ ಪಂದ್ಯಗಳಲ್ಲಿ ಕೆಲವು ಮೈನವಿರೇಳಿಸುವ ಸ್ಕೋರ್ ಮಾಡಿದ್ದಾರೆ. ಸೀಮಿತ ಓವರುಗಳ ಕ್ರಿಕೆಟ್‌ನಲ್ಲಿ ಶ್ರೇಷ್ಟ ಫಿನಿಷರ್ ಎಂಬ ಶ್ರೇಯ ಸಂಪಾದಿಸಿರುವ ಧೋನಿ ಏಕದಿನ ಪಂದ್ಯಗಳಲ್ಲಿ ಕೆಲವು ಅದ್ಭುತ ಸ್ಕೋರ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಂಚಲನ ಮೂಡಿಸಿದ್ದರು.


 

 
 ರಾಂಚಿಯಲ್ಲಿ ಹುಟ್ಟಿದ ಧೋನಿ ಶ್ರೀಲಂಕಾ ವಿರುದ್ಧ 183 ರನ್ ಮತ್ತು ಪಾಕಿಸ್ತಾನ ವಿರುದ್ಧ 148 ರನ್ ಸ್ಕೋರ್ ಮಾಡಿದ್ದರು. ಆದರೆ ಅನೇಕ ಮಂದಿ ಐಸಿಸಿ 2011ರ ವಿಶ್ವಕಪ್‌ನಲ್ಲಿ ಧೋನಿ ಶ್ರೀಲಂಕಾ ವಿರುದ್ಧ ಸ್ಕೋರ್ ಮಾಡಿದ ಅಜೇಯ 91 ರನ್ ಅತ್ಯಂತ ಶ್ರೇಷ್ಟ ಇನ್ನಿಂಗ್ಸ್ ಎಂದು ಅನೇಕ ಮಂದಿ ನಂಬಿದ್ದಾರೆ.
 
ಆರಂಭದ ಕಳಪೆ ಬ್ಯಾಟಿಂಗ್ ಬಳಿಕ ಧೋನಿ ಫೈನಲ್ ಪಂದ್ಯದಲ್ಲಿ ಯುವರಾಜ್ ಮತ್ತು ರೈನಾಗಿಂತ ಮುಂಚೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದರು. ಭಾರತ ತಂಡ ಸೆಹ್ವಾಗ್ ಮತ್ತು ತೆಂಡೂಲ್ಕರ್ ವಿಕೆಟ್ ಕಳೆದುಕೊಂಡಿತ್ತು. ಗಂಭೀರ್ ಮತ್ತು ಕೊಹ್ಲಿ ಮೂರನೇ ವಿಕೆಟ್‌ಗೆ ಮನೋಜ್ಞ 83 ರನ್ ಕಲೆಹಾಕಿದರು.
 
ದಿಲ್ಶನ್ ಕೊಹ್ಲಿಯನ್ನು ಔಟ್ ಮಾಡುವ ಮೂಲಕ ಲಂಕನ್ನರಿಗೆ ಉತ್ತಮ ಮುನ್ನಡೆ ಗಳಿಸಿಕೊಟ್ಟರು. ಭಾರತ ಇನ್ನೂ ಏಳುವಿಕೆಟ್‌ಗಳನ್ನು ಹೊಂದಿದ್ದು 161 ರನ್ ಸ್ಕೋರ್ ಮಾಡಬೇಕಿತ್ತು. 
 
 ಧೋನಿ ಎಂಟ್ರಿ ಕೊಟ್ಟ ಬಳಿಕ ಲಂಕಾದ ಬೌಲರುಗಳನ್ನು ಚೆನ್ನಾಗಿಯೇ ದಂಡಿಸಿ ಮೂಲೆ, ಮೂಲೆಗೆ ಚೆಂಡನ್ನು ಅಟ್ಟಿದರು. ಭಾರತ ವಿಶ್ವಕಪ್ ಮುಡಿಗೇರಿಸಿಕೊಂಡು ಗೆಲುವಿನ ನಗೆ ಬೀರಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ