500-600 ಮಹಿಳೆಯರ ಜತೆ ಮಲಗಿದ್ದ ಟಿನೊ ಬೆಸ್ಟ್: ಆತ್ಮಕಥೆಯಲ್ಲಿ ಬಹಿರಂಗ

ಗುರುವಾರ, 21 ಏಪ್ರಿಲ್ 2016 (14:38 IST)
ನವದೆಹಲಿ:  ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರ ಶೃಂಗಾರ ಲೀಲೆ ಕುರಿತು ಸುದ್ದಿಗಳು ಹರಿದಾಡಿತ್ತು.  ಈಗ ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟರ್ ಟಿನೊ ಬೆಸ್ಟ್ ಅವರ ಮೈಂಡ್ ದಿ ವಿಂಡೋಸ್: ಮೈ ಸ್ಟೋರಿ ಆತ್ಮಕಥೆ ಹೊರಬರುತ್ತಿದ್ದು, ವೇಗಿ ಟಿನೊ ಬೆಸ್ಟ್ ತಾನು ವೆಸ್ಟ್ ಇಂಡೀಸ್ ತಂಡದ ಜತೆ ವಿದೇಶಗಳಲ್ಲಿ ಆಡುವಾಗ 500ರಿಂದ 600 ಮಹಿಳೆಯರ ಜತೆ ಹಾಸಿಗೆ ಹಂಚಿಕೊಂಡಿದ್ದಾಗಿ ಪುಸ್ತಕದಲ್ಲಿ ಬಹಿರಂಗ ಮಾಡಿದ್ದಾರೆ. 
 
ಬೆಸ್ಟ್ ವೆಸ್ಟ್ ಇಂಡೀಸ್ ತಂಡದ ಜತೆ 11 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನ ಹೊಂದಿದ್ದಾರೆ. ಪುಸ್ತಕದ ಒಂದು ಭಾಗದಲ್ಲಿ ಬೆಸ್ಟ್ ತಮ್ಮ ನೋಟದ ಬಗ್ಗೆ, ಮಹಿಳೆಯರು ಮತ್ತು ವೆಸ್ಟ್ ಇಂಡೀಸ್ ಸಹಆಟಗಾರರ ಜತೆ ಲೈಂಗಿಕ ಸ್ಪರ್ಧೆಗಳನ್ನು ಕುರಿತು ಬಿಚ್ಚಿಟ್ಟಿದ್ದಾರೆ. 
 
 ನಾನು ಹುಡುಗಿಯರನ್ನು ಪ್ರೀತಿಸುತ್ತೇನೆ, ಅವರು ನನ್ನನ್ನು ಪ್ರೀತಿಸುತ್ತಾರೆ, ನಾನು ಜಗತ್ತಿನಲ್ಲೇ ಆಕರ್ಷಕ ನೋಟದ ಬೊಕ್ಕತಲೆಯ ಆಟಗಾರನೆಂದು ಭಾವಿಸಿದ್ದೇನೆ ಎಂದು ಬರೆದಿದ್ದಾರೆ.  ಅವರ ಆತ್ಮಕಥೆಯ ಒಂದು ತುಣುಕು ಹೀಗಿದೆ, ನಾನು ಕ್ರಿಕೆಟ್ ಆಟಗಾರನಾಗಿ ಹೋದಕಡೆಯಲ್ಲೆಲ್ಲಾ ಹುಡುಗಿಯರ ಜತೆ ಮಾತನಾಡುತ್ತಿದ್ದೆ, ಡೇಟಿಂಗ್  ಮಾಡುತ್ತಿದ್ದೆ ಮತ್ತು ಮಲಗುತ್ತಿದ್ದೆ ಎಂದು ಟಿನೊ ಬೆಸ್ಟ್ ಹೇಳಿದ್ದಾರೆ. 
 
ಟಿನೊ ಬೆಸ್ಟ್ ಹೀಗೆ ಹೆಣ್ಣುಬಾಕನಾಗಿ ಬದಲಾಗಿದ್ದು ಹೇಗೆಂದು ಕೂಡ ಪುಸ್ತಕದಲ್ಲಿ ಬರೆದಿದ್ದಾನೆ. ನನ್ನ ಮೊದಲ ಲವ್ ಮೆಲಿಸಾಗೆ ಸುಂದರ ಮಗು ತಮಾನಿ ಜನಿಸಿತ್ತು. ಆದರೆ ನಮ್ಮ ದಾಂಪತ್ಯದಲ್ಲಿ ಬಿರುಕು ಬಿಟ್ಟಿತು. ನಾನು ಬಾರ್ಬಡೋಸ್ ಪರ ಹೆಚ್ಚು ವಿಕೆಟ್ ಪಡೆದರೆ ಮೆಲಿಸಾ ಓಡಿಬರುತ್ತಾಳೆಂದು ಸಂಗಡಿಗರು ಹೇಳಿದ್ದರು. ಆದರೆ ಏನು ಮಾಡಿದರೂ ಮೆಲಿಸಾ ಹಿಂತಿರುಗದೇ ಕಾಯಂ ಗುಡ್ ಬೈ ಹೇಳಿದ್ದಳು. ಇದರಿಂದ ತೀರಾ ನಿರಾಶೆಯಿಂದ ಬೆಂದು ಪ್ಲೇಬಾಯ್ ಆದೆ. ನಾನು ಒಂದು ರೀತಿಯಲ್ಲಿ ಪುರುಷ ವೇಶ್ಯೆಯಾಗಿ ಬದಲಾದೆ ಎಂದು ಟಿನೊ ಬೆಸ್ಟ್ ಹೇಳಿಕೊಂಡಿದ್ದಾರೆ. 
ತಾಜಾಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ