ವಿರಾಟ್ ಕೊಹ್ಲಿಗೆ ಸಚಿನ್ ತೆಂಡುಲ್ಕರ್ ಕೊಟ್ಟ ಶ್ರೇಷ್ಠ ಸಲಹೆ ಏನು ಗೊತ್ತಾ?
ಗುರುವಾರ, 12 ಜನವರಿ 2017 (10:08 IST)
ಮುಂಬೈ: ಟೀಂ ಇಂಡಿಯಾದ ಮೂರೂ ಮಾದರಿಯ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿರುವುದನ್ನು ನಂಬುವುದಕ್ಕೇ ಆಗುತ್ತಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ. ಹಾಗಾದರೆ ಕ್ರಿಕೆಟಿಗನ ಜೀವನ ಇಷ್ಟೊಂದು ಅದ್ಭುತವಾಗಲು ಯಾರು ಕೊಟ್ಟ ಸಲಹೆ ಪ್ರಯೋಜನವಾಯಿತು ಎಂಬುದನ್ನು ಕೊಹ್ಲಿ ವಿವರಿಸಿದ್ದಾರೆ.
ನಾನು ಆರಂಭದ ದಿನಗಳಲ್ಲಿ ಉತ್ತಮವಾಗಿ ಆಡಬೇಕು ಎಂಬ ಕನಸು ಮಾತ್ರ ಹೊತ್ತುಕೊಂಡಿದ್ದೆ. ಈ ಸಂದರ್ಭದಲ್ಲಿ ಕ್ರಿಕೆಟ್ ನಲ್ಲಿ ಶ್ರೇಷ್ಠ ಸಲಹೆ ಎಂದು ನನಗೆ ಕೊಟ್ಟಿದ್ದು ನನ್ನ ಹೀರೋ ಸಚಿನ್ ತೆಂಡುಲ್ಕರ್. ನಿನ್ನ ಆಟದಲ್ಲಿ ನಂಬಿಕೆಯಿಡು. ಬೇರೆಯವರು ಹೇಗೆ ಆಡುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಿನ್ನ ಶೈಲಿಯಲ್ಲಿ ಆಡುತ್ತಿದ್ದರೆ ಯಶಸ್ಸು ನಿನ್ನದಾಗುತ್ತದೆ ಎಂದು ಸಚಿನ್ ಅಂದು ಕೊಹ್ಲಿಗೆ ಹೇಳಿದ್ದರಂತೆ.
ಅದರ ನಂತರ ಕೊಹ್ಲಿ ಹಿಂತಿರುಗಿ ನೋಡಲಿಲ್ಲ. ತಮ್ಮದೇ ಹಾದಿಯಲ್ಲಿ ನಡೆದರು. ಅದಕ್ಕೇ ಇಂದು ಈ ಯಶಸ್ಸು ಸಿಕ್ಕಿದ್ದು ಎಂದು ಕ್ರಿಕೆಟ್ ದೇವರ ನೆನೆಸಿಕೊಳ್ಳುತ್ತಾರೆ ಕೊಹ್ಲಿ. ಸದ್ಯ ಟೆಸ್ಟ್ ತಂಡವನ್ನು ನಂ.1 ಸ್ಥಾನಕ್ಕೆ ಕೊಂಡೊಯ್ದ ಕೊಹ್ಲಿ ಇನ್ನು, ಮೂರೂ ಮಾದರಿಗಳಲ್ಲಿ ಭಾರತವನ್ನು ನಂ.1 ಮಾಡುವ ಗುರಿ ಹೊಂದಿಕೊಂಡಿದ್ದಾರಂತೆ. ಇಂತಹದ್ದೊಂದು ದಿನ ನನ್ನ ಜೀವನದಲ್ಲಿ ಬರಬಹುದು ಎಂದು ಅಂದುಕೊಂಡಿರಲೇ ಇಲ್ಲ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ