ಕೋಚ್ ಸ್ಥಾನ ತ್ಯಜಿಸಿದ ಮೇಲೆ ಅನಿಲ್ ಕುಂಬ್ಳೆ ಹೇಳಿದ್ದೇನು?

ಬುಧವಾರ, 21 ಜೂನ್ 2017 (08:40 IST)
ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅನಿಲ್ ಕುಂಬ್ಳೆ ಇದರ ಹಿಂದಿನ ಕಾರಣ ಸೇರಿದಂತೆ ಹಲವು ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ.

 
ಮೊದಲನೆಯದಾಗಿ ನನಗೆ ಇಷ್ಟು ಕಾಲ ಭಾರತೀಯ ಕ್ರಿಕೆಟ್ ಗೆ ಸೇವೆ ಸಲ್ಲಿಸಲು ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದಿರುವ ಕುಂಬ್ಳೆ ತಮ್ಮ ಹಾಗೂ ಕೊಹ್ಲಿ ನಡುವೆ ಸಮನ್ವಯತೆಯಿರಲಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

‘ವಿಶೇಷವೆಂದರೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆ ಮುನ್ನವಷ್ಟೇ ಕೊಹ್ಲಿಗೆ ನನ್ನ ಜತೆ ಕೆಲಸ ಮಾಡಲು ಇಷ್ಟವಿಲ್ಲವೆಂದು ತಿಳಿಯಿತು. ಆದರೂ ಬಿಸಿಸಿಐ ಅಧಿಕಾರಿಗಳು ನಮ್ಮ ನಡುವೆ ಸಂಧಾನ ಏರ್ಪಡಿಸಲು ಸಿದ್ಧರಿದ್ದರು. ಆದರೂ, ಸ್ವತಃ ನಾಯಕನಿಗೆ ನನ್ನ ಜತೆ ಕೆಲಸ ಮಾಡಲು ಇಷ್ಟವಿಲ್ಲವೆಂದ ಮೇಲೆ ಆ ಹುದ್ದೆಯಲ್ಲಿ ಮುಂದುವರಿಯುವುದರಲ್ಲಿ ಅರ್ಥವಿಲ್ಲವೆನಿಸಿತು.

ಅದಕ್ಕಾಗಿ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದೆ. ಹಾಗೂ ನನ್ನ ಬದಲಿಗೆ ಬಿಸಿಸಿಐ ಬೇರೆ ಯಾರಾನ್ನಾದರೂ ಆಯ್ಕೆ ಮಾಡಲಿ. ಮುಂದೆಯೂ ಭಾರತೀಯ ಕ್ರಿಕೆಟ್ ನ ಶುಭಾಕಾಂಕ್ಷಿಯಾಗಿ ಮುಂದುವರಿಯುತ್ತೇನೆ. ತಂಡದ ಯಶಸ್ಸು ನಾಯಕ, ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಸಲ್ಲಬೇಕು.

ನನಗೆ ಇದುವರೆಗೆ ಸಹಕಾರ ನೀಡಿದ ಎಲ್ಲರಿಗೂ ಹಾಗೂ ಅವಕಾಶ ನೀಡಿದ ಬಿಸಿಸಿಐ, ಕ್ರಿಕೆಟ್ ಸಲಹಾ ಸಮಿತಿ, ಆಡಳಿತ ಮಂಡಳಿ ಎಲ್ಲರಿಗೂ ನನ್ನ ಧನ್ಯವಾದಗಳು’ ಎಂದು ಕುಂಬ್ಳೆ ತಮ್ಮ ರಾಜೀನಾಮೆ ಪತ್ರದಲ್ಲಿ ಸವಿವರವಾಗಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ