ನಿವೃತ್ತಿ ಬಗ್ಗೆ ಸ್ವತಃ ಧೋನಿ ಹೇಳಿದ ಮಾತೇನು?

ಶುಕ್ರವಾರ, 24 ಮಾರ್ಚ್ 2017 (10:42 IST)
ರಾಂಚಿ: ಕ್ರಿಕೆಟ್ ನಾಯಕತ್ವ ತ್ಯಜಿಸಿದ ಮೇಲೆ ಎಲ್ಲಿ ಹೋದರೂ ಇನ್ನು ಎಷ್ಟು ದಿನ ಕ್ರಿಕೆಟ್ ಆಡ್ತೀರಿ ಎಂಬುದೇ ಧೋನಿ ಮುಂದೆ ಬರುವ ಪ್ರಶ್ನೆ. ಕೆಲವರು ತಮಗೆ ತೋಚಿದಂತೆ ಬರೆದುಕೊಂಡರು. ಸ್ವತಃ ಧೋನಿ ಈ ವಿಷಯದ ಬಗ್ಗೆ ಏನು ಹೇಳುತ್ತಾರೆ ಗೊತ್ತಾ?

 

ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಧೋನಿಗೆ 2019 ರ ವಿಶ್ವಕಪ್ ವರೆಗೂ ಆಡ್ತೀರಾ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಉತ್ತರಿಸಿದ ಧೋನಿ “2019 ತುಂಬಾ ದೂರದ ಮಾತು. ಅದರ ಮಧ್ಯೆ ಏನು ಬೇಕಾದರೂ ಆಗಬಹುದು. ಭಾರತಕ್ಕೆ ಈ ಸಮಯದಲ್ಲಿ ಬಿಡುವಿಲ್ಲದ ಕ್ರಿಕೆಟ್ ಪಂದ್ಯವಿದೆ. ಇಂತಹ ಸಂದರ್ಭದಲ್ಲಿ ನೀವು ವಿಂಟೇಜ್ ಕಾರ್ ನ ಹಾಗೆ ಆಗುತ್ತೀರಿ. ಯಾವಾಗ ಕೈ ಕೊಡುತ್ತದೋ, ಎಲ್ಲಿಯವರೆಗೆ ಬರುತ್ತದೋ ಹೇಳಕ್ಕಾಗಲ್ಲ” ಎಂದಿದ್ದಾರೆ.

 
ಹಾಗಾಗಿ ಮುಂದಿನ ವಿಶ್ವಕಪ್ ವರೆಗೆ ತಾವು ಕ್ರಿಕೆಟ್ ಆಡುವುದು ಅನುಮಾನ ಎಂದು ಸೂಕ್ಷ್ಮವಾಗಿ ಹೇಳಿದ್ದಾರೆ. ಆದರೆ ಈಗ ನಾನಿರುವ ಹಾಗೇ ಇದ್ದರೆ, ಮುಂದಿನ ವಿಶ್ವಕಪ್ ವರೆಗೆ ಆಡುತ್ತೇನೆ ಎಂದೂ ಧೋನಿ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ