ಚೆನ್ನೈ: ಐಪಿಎಲ್ ನಲ್ಲಿ ಚೆನ್ನೈಸೂಪರ್ ಕಿಂಗ್ಸ್ ತಂಡದ ಮಾಲಿಕ ಎನ್. ಶ್ರೀನಿವಾಸನ್ ಅಳಿಯ ಗುರುನಾಥ್ ಮೈಯಪ್ಪನ್ ಪರ ಧೋನಿ ತನಿಖಾ ತಂಡದ ಪರ ಮಾತನಾಡಿದ್ದರು ಎಂಬ ಆರೋಪ ನಿಜವೇ? ಈ ಬಗ್ಗೆ ಧೋನಿ ಏನು ಹೇಳಿದ್ದಾರೆ ಗೊತ್ತಾ?
ಗುರುನಾಥ್ ಮೈಯಪ್ಪನ್ ಕೇವಲ ಕ್ರಿಕೆಟ್ ಆಸಕ್ತ ಎಂದು ಧೋನಿ ತನಿಖಾ ತಂಡದ ಎದುರು ಹೇಳಿ ಅವರನ್ನು ರಕ್ಷಿಸಲು ನೋಡಿದ್ದರು ಎಂದು ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಆದರೆ ಈ ಬಗ್ಗೆ ರಾಜ್ ದೀಪ್ ಸರ್ದೇಸಾಯಿ ಬರೆದ ‘ಡೆಮಾಕ್ರಸಿ ಇಲೆವನ್’ ಪುಸ್ತಕದಲ್ಲಿ ಧೋನಿ ಪ್ರತಿಕ್ರಿಯಿಸಿದ್ದಾರೆ.
ನಾನು ಆತ ಕ್ರಿಕೆಟ್ ‘ಆಸಕ್ತನಷ್ಟೇ’ ಎಂಬ ಪದ ಬಳಸಿರಲಿಲ್ಲ. ಆದರೆ ಚೆನ್ನೈ ತಂಡದ ಆನ್ ಫೀಲ್ಡ್ ನಿರ್ಧಾರಗಳಲ್ಲಿ, ಅಥವಾ ತಂಡದ ಯಾವುದೇ ನಿರ್ಧಾರಗಳಲ್ಲಿ ಆತನ ಕೈವಾಡವಿರಲಿಲ್ಲ ಎಂದು ಹೇಳಿದ್ದೆನಷ್ಟೇ ಎಂದು ಈ ಪುಸ್ತಕದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಚೆನ್ನೈ ತಂಡ ಎರಡು ವರ್ಷ ಐಪಿಎಲ್ ನಿಂದ ನಿಷೇಧಕ್ಕೊಳಗಾಗಿತ್ತು. ಈ ವರ್ಷ ಮತ್ತೆ ಕಣಕ್ಕಿಳಿಯುತ್ತಿದ್ದು, ಧೋನಿ ಮತ್ತೆ ಚೆನ್ನೈ ತಂಡದ ನೇತೃತ್ವ ವಹಿಸುವ ಸಂಭವವಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ