ವೀರೇಂದ್ರ ಸೆಹ್ವಾಗ್ ಶಾಲೆಯಲ್ಲಿ ಸಚಿನ್ ತೆಂಡುಲ್ಕರ್ ಮಾಡಿದ್ದೇನು ಗೊತ್ತಾ?

ಮಂಗಳವಾರ, 6 ಡಿಸೆಂಬರ್ 2016 (11:19 IST)
ನವದೆಹಲಿ: ವೀರೇಂದ್ರ ಸೆಹ್ವಾಗ್ ತಮ್ಮ ತಂದೆಯ ಕನಸಿನ ಕೂಸಾದ ಸೆಹ್ವಾಗ್ ಇಂಟರ್ ನ್ಯಾಷನಲ್ ಸ್ಕೂಲ್ ನಡೆಸುತ್ತಾರೆ. ಇಲ್ಲಿಗೆ ವಿಶೇಷ ಅತಿಥಿಯಾಗಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಆಗಮಿಸಿದ್ದರು. ಅವರು ಅಲ್ಲೇನು ಹೇಳಿದರು ಗೊತ್ತಾ?

ಜೀವನದಲ್ಲಿ ವೈಫಲ್ಯಗಳನ್ನು ಹೇಗೆ ಎದರಿಸಬೇಕು ಎಂಬುದನ್ನು ಅಲ್ಲಿನ ಮಕ್ಕಳಿಗೆ ಪಾಠ ಹೇಳಿದರು. ವೈಫಲ್ಯಗಳ ಬಗ್ಗೆ ಯೋಚನೆಯನ್ನೇ ಮಾಡಬಾರದು ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು. ತಮ್ಮ ಮಕ್ಕಳಿಗೆ ತಾನೇನು ಸಲಹೆ ಕೊಡುತ್ತೇನೆ ಎನ್ನುವುದನ್ನೂ ಅವರು ಬಿಚ್ಚಿಟ್ಟರು.

“ನಾನು ಅವರಿಗೆ ಹೇಳುತ್ತೇನೆ. ಬೆಳಿಗ್ಗೆ ಎದ್ದಾಗ ನಿಮ್ಮ ಬಳಿ ಎರಡು ಆಯ್ಕೆಗಳಿವೆ. ನಿನ್ನ ಜೀವನದಲ್ಲಿ ಇರುವುದರ ಬಗ್ಗೆ ದೇವರಿಗೆ ಧನ್ಯವಾದ ಹೇಳಬೇಕು ಅಥವಾ ನೀವು ಏನು ಮಾಡಿಲ್ಲ ಎನ್ನುವುದರ ಬಗ್ಗೆ ಕೊರಗುತ್ತಾ ಕೂರಬೇಕು” ಎಂದು ಸಚಿನ್ ಹೇಳಿಕೊಂಡರು.

 ಹೀಗೆ ಲೈವ್ಲಿಯಾಗಿ ಸಾಗಿದ ಈ ಸಂವಾದದ ವಿಡಿಯೋವನ್ನು ಸೆಹ್ವಾಗ್  ಫೇಸ್ ಬುಕ್ ಖಾತೆಯಲ್ಲಿ ಲೈವ್ ಆಗಿ ತೋರಿಸಲಾಗಿತ್ತು.  ಇದು ಭಾರೀ ಹಿಟ್ ಆಗಿದ್ದು ಏಳು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ