ರವೀಂದ್ರ ಜಡೇಜಾ ನಿಜವಾದ ವಯಸ್ಸೆಷ್ಟು?

ಮಂಗಳವಾರ, 6 ಡಿಸೆಂಬರ್ 2016 (13:13 IST)
ಮುಂಬೈ: ಕ್ರಿಕೆಟಿಗ ರವೀಂದ್ರ ಜಡೇಜಾ ನಿಜವಾದ ವಯಸ್ಸು ಎಷ್ಟು? ರೋಹಿತ್ ಶರ್ಮಾ ಜಡೇಜಾ ಜನುಮ ದಿನಕ್ಕೆ ಮಾಡಿದ ಟ್ವೀಟ್ ಹೀಗೊಂದು ಪ್ರಶ್ನೆ ಹುಟ್ಟು ಹಾಕುತ್ತಿದೆ. ಆದರೆ ಅವರು ಮಾಡಿದ್ದು ತಮಾಷೆಗಾಗಿ.

ಇಂದು ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಬರ್ತ್ ಡೇ. ಅವರಿಗೆ ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ವಿಶ್ ಮಾಡಿದ್ದಾರೆ. ಇದರಲ್ಲಿ ರೋಹಿತ್ ಈಗಲಾದರೂ ನಿನ್ನ ನಿಜವಾದ ವಯಸ್ಸೆಷ್ಟು ಎಂದು ಬಹಿರಂಗಪಡಿಸು. ಜನ ನಿನಗೆ 28 ವರ್ಷ ಅಂದುಕೊಂಡಿದ್ದಾರೆ ಎಂದು ಜಡೇಜಾ ಕಾಲೆಳೆದಿದ್ದಾರೆ.

ಇನ್ನು ಎಂದಿನಂತೆ ಸೆಹ್ವಾಗ್ ಟ್ವೀಟ್ ತಮಾಷೆಯಾಗಿದೆ. ಚಿಪ್ಸ್ ಪ್ಯಾಕೆಟ್ ನಿಂದ ಚಿಪ್ಸ್ ಖಾಲಿ ಮಾಡುವಂತೆ ಬೇಗ ಓವರ್ ಮುಗಿಸುವ ಜಡೇಜಾಗೆ ಹ್ಯಾಪೀ ಬರ್ತ್ ಡೇ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಹೀಗೂ ವಿಶ್ ಮಾಡುತ್ತಾರಾ ಎಂದು ನಿಮಗನಿಸಿದರೆ ತಪ್ಪಿಲ್ಲ ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ