ಧೋನಿ, ಯುವರಾಜ್ ಗೆ ನಿರ್ಗಮನದ ಬಾಗಿಲು ತೋರಿಸ್ತಾರಾ ರವಿಶಾಸ್ತ್ರಿ?!

ಗುರುವಾರ, 13 ಜುಲೈ 2017 (10:35 IST)
ಮುಂಬೈ: ಟೀಂ ಇಂಡಿಯಾದ ಹೊಸ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಮುಂದಿನ ವಿಶ್ವಕಪ್ ವರೆಗೆ ಕೋಚ್ ಆಗಿ ಮುಂದುವರಿಯಲಿದ್ದಾರೆ. ಹೀಗಾಗಿ ಹಿರಿಯ ಆಟಗಾರರ ಬಗೆಗೆ ಅವರ ನಿಲುವು ಏನಿರಬಹುದೆಂದು ಚರ್ಚೆಗಳು ಪ್ರಾರಂಭವಾಗಿದೆ.


ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ ರವಿಶಾಸ್ತ್ರಿ ಈ ಬಗ್ಗೆ ನಾನು ಈಗಾಗಲೇ ಏನೂ ಆಲೋಚನೆ ಮಾಡಿಲ್ಲ. ನಾನು ಈಗಷ್ಟೇ ಕೋಚ್ ಹುದ್ದೆಗೆ ಆಯ್ಕೆಗೊಂಡಿದ್ದೇನೆ. ಮುಂದಿನ ಯೋಜನೆ ಹಾಕಿಕೊಳ್ಳುವ ಮೊದಲು ನಾಯಕ ವಿರಾಟ್ ಕೊಹ್ಲಿಯೊಂದಿಗೆ ಚರ್ಚಿಸಬೇಕಿದೆ ಎಂದಿದ್ದಾರೆ.

ಕಳೆದ 12 ತಿಂಗಳಲ್ಲಿ ತಂಡದಲ್ಲಿ ಏನಾಗಿದೆ ಎಂದು ನನಗೆ ಗೊತ್ತಿಲ್ಲ. ಮುಂದಿನ ನನ್ನ  ಅವಧಿಯನ್ನು ಹೊಸದಾಗಿ ಆರಂಭಿಸುತ್ತೇನೆ ಎಂದಿರುವ ರವಿಶಾಸ್ತ್ರಿ ಹೊಸ ತಂಡದಲ್ಲಿ ಹಿರಿಯ ಧೋನಿ ಮತ್ತು ಯುವರಾಜ್ ಗೆ ಯಾವ ಸ್ಥಾನ ನೀಡಲಿದ್ದಾರೆ ಎನ್ನುವುದು ಇದೀಗ ಎಲ್ಲರ ಕುತೂಹಲವಾಗಿದೆ. ಈ ಮೊದಲು ರಾಹುಲ್ ದ್ರಾವಿಡ್ ಧೋನಿ ಮತ್ತು ಯುವರಾಜ್ 2019 ರ ವಿಶ್ವಕಪ್ ವೇಳೆಗೆ ತಮ್ಮ ಭವಿಷ್ಯವೇನೆಂದು ನಿರ್ಧರಿಸಬೇಕೆಂದು ಸೂಚನೆ ನೀಡಿದ್ದರು. ಅವರೀಗ ಕೆಲವು ನಿರ್ದಿಷ್ಟ ಸರಣಿಗೆ ಬ್ಯಾಟಿಂಗ್ ಕೋಚ್ ಆಯ್ಕೆಯಾಗಿರುವುದರಿಂದ ಈ ಇಬ್ಬರು ಹಿರಿಯ ಆಟಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಇದನ್ನೂ ಓದಿ.. ಅರ್ಥಪೂರ್ಣವಾಯಿತು ಶಿವರಾಜ್ ಕುಮಾರ್ ಹುಟ್ಟುಹಬ್ಬ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ