ಕ್ರಿಕೆಟ್ ನಂತರ ವಿರಾಟ್ ಕೊಹ್ಲಿ ಬದುಕಿನ ಗುರಿ ಏನಾಗಿರುತ್ತದೆ ಗೊತ್ತಾ?!
ಬುಧವಾರ, 11 ಜನವರಿ 2017 (09:07 IST)
ನವದೆಹಲಿ: ಕ್ರಿಕೆಟ್ ವೃತ್ತಿ ಜೀವನ ಎಷ್ಟು ದಿನ? ಫಿಟ್ ಆಗಿರುವವರೆಗೆ. ನಂತರವೂ ಜೀವನವಿದೆಯಲ್ಲಾ? ಅದಕ್ಕೊಂದು ಉದ್ದೇಶ ಬೇಕಲ್ವಾ? ಅದಕ್ಕಾಗಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ಬದುಕಿನತ್ತ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ.
ಖಂಡಿತಾ ಇದು ಅವರ ಮದುವೆ ಸುದ್ದಿ ಅಲ್ಲ ಸ್ವಾಮಿ.. ಕ್ರಿಕೆಟ್ ನಿಂದ ನಿವೃತ್ತರಾದ ಮೇಲೆ ಒಳ್ಳೆಯ ಬ್ಯುಸಿನೆಸ್ ಮೆನ್ ಆಗಲು ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಸದ್ಯದಲ್ಲೇ ಅವರ ಸ್ವಂತ ಬ್ರ್ಯಾಂಡ್ ನ ಕ್ರೀಡೆ ಮತ್ತು ಜೀವನ ಶೈಲಿಗೆ ಅಗತ್ಯವಾದ ವಸ್ತುಗಳ ಬ್ರಾಂಡ್ ಬಿಡುಗಡೆ ಮಾಡಲಿದ್ದಾರಂತೆ. ಹೀಗಂತ ಕೊಹ್ಲಿಯೇ ಸುಳಿವು ನೀಡಿದ್ದಾರೆ.
“ನನಗೆ ಕ್ರಿಕೆಟ್ ನಂತರ ಬದುಕಬೇಕಲ್ಲಾ? ಅದಕ್ಕಾಗಿ ಏನಾದರೂ ಮಾಡಲು ಉದ್ದೇಶಿಸಿದ್ದೇನೆ. ವ್ಯವಹಾರದ ಮೇಲೆ ತೊಡಗಿಸಿಕೊಳ್ಳುವುದು ನನಗೆ ಇಷ್ಟದ ಕೆಲಸವೇ. ಬಹುಶಃ ಮುಂದಿನ ದಿನಗಳಲ್ಲಿ ಬ್ಯುಸಿನೆಸ್ ಫೀಲ್ಡ್ ಗೆ ಕಾಲಿಡಬಹುದು” ಎಂದಿದ್ದಾರೆ 17 ಬ್ರ್ಯಾಂಡ್ ಗಳ ರಾಯಭಾರಿ ಕೊಹ್ಲಿ.
ಇತ್ತೀಚೆಗಷ್ಟೇ ಕೊಹ್ಲಿ ಮತ್ತು ಆಡಿಡಾಸ್ ಕಂಪನಿಯ ಒಪ್ಪಂದ ಕೊನೆಗೊಂಡಿತ್ತು. ನಿನ್ನೆಯಷ್ಟೇ ಚೀನಾದ ಜಿಯೊನಿ ಮೊಬೈಲ್ ಕಂಪನಿಯೊಂದಕ್ಕೆ ಹೊಸ ಒಪ್ಪಂದ ಮಾಡಿಕೊಂಡಿದ್ದರು. ಸದ್ಯ ಗೆಳತಿ ಅನುಷ್ಕಾ ಜತೆ ಮುಂಬೈನ ಫ್ಲೈ ಬಂಗ್ಲೆಯಲ್ಲಿ ಮಜಾ ಮಾಡುತ್ತಿರುವ ಕೊಹ್ಲಿಗೆ ಇಂಗ್ಲೆಂಡ್ ಸರಣಿಗೆ ಮೊದಲು ರಿಲ್ಯಾಕ್ಸ್ ಆಗುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ