ರೋಹಿತ್ ಶರ್ಮಾ ಮದುವೆ ರಿಂಗ್ ಮರೆತು ಹೋದ ಗಳಿಗೆ
ನನಗೆ ಲೇಟಾಗಿ ಎದ್ದು ಗಡಿಬಿಡಿಯಲ್ಲಿ ಹೊರಡುವ ಚಾಳಿಯಿತ್ತು. ಹೀಗೇ ಒಮ್ಮೆ ನನ್ನ ಮದುವೆಯಾದ ಹೊಸತರಲ್ಲಿ ಟೀಂ ಹೋಟೆಲ್ ನಲ್ಲಿ ವೆಡ್ಡಿಂಗ್ ರಿಂಗ್ ಮರೆತಿದ್ದೆ. ಬಸ್ ನಲ್ಲಿ ಕುಳಿತಿದ್ದಾಗ ಪಕ್ಕದಲ್ಲಿದ್ದ ಉಮೇಶ್ ಕೈಯಲ್ಲಿದ್ದ ವೆಡ್ಡಿಂಗ್ ರಿಂಗ್ ನೋಡಿದಾಗ ನನಗೆ ನನ್ನ ರಿಂಗ್ ನೆನಪಾಯ್ತು. ಓಹ್.. ನನ್ನ ರಿಂಗ್ ಮರೆತುಹೋಯ್ತಲ್ಲಾ ಎಂದು ಹರ್ಭಜನ್ ಸಿಂಗ್ ಗೆ ವಿಷಯ ತಿಳಿಸಿದ್ದೆ. ನಿಮಗೆ ಯಾರಾದರೂ ಹೋಟೆಲ್ ನಲ್ಲಿದ್ದವರು ಗೊತ್ತಿದ್ದರೆ ನನ್ನ ರಿಂಗ್ ಹುಡುಕಿಕೊಡಿ ಎಂದು ಹೇಳಿ ಎಂದೆ. ಈ ವಿಷಯ ಕೊನೆಗೆ ಎಲ್ಲರಿಗೂ ಗೊತ್ತಾಯ್ತು. ಕೊಹ್ಲಿಯಂತೂ ಇದನ್ನು ದೊಡ್ಡ ಸುದ್ದಿ ಮಾಡಿಬಿಟ್ಟರು ಎಂದು ರೋಹಿತ್ ಹೇಳಿಕೊಂಡಿದ್ದಾರೆ.