ಯುವರಾಜ್ ಸಿಂಗ್ ಮಾಜಿ ಗರ್ಲ್ ಫ್ರೆಂಡ್ ನೋಡಿ ಪತ್ನಿ ಹೇಝಲ್ ಕೀಚ್ ಮಾಡಿದ್ದೇನು?!
ಶನಿವಾರ, 11 ಮಾರ್ಚ್ 2017 (09:19 IST)
ನವದೆಹಲಿ: ತನ್ನ ಪತಿಯ ಮಾಜಿ ಗೆಳತಿ ಎದುರು ಬಂದರೆ ಯಾರೇ ಆದರೂ ಏನು ಮಾಡುತ್ತಾರೆ? ಯುವರಾಜ್ ಸಿಂಗ್ ಪತ್ನಿ ಹೇಝಲ್ ಕೀಚ್ ಕೂಡಾ ಅದನ್ನೇ ಮಾಡಿದರು.
ಯುವರಾಜ್ ಸಿಂಗ್ ಹೇಝಲ್ ಕೈ ಹಿಡಿಯುವ ಮೊದಲು ಬಾಲಿವುಡ್ ಬೆಡಗಿ ಕಿಮ್ ಶರ್ಮಾ ಜತೆ ಹಲವು ದಿನ ಮರ ಸುತ್ತಿದ್ದರು. ನಂತರ ಅವರಿಬ್ಬರ ನಡುವೆ ಬ್ರೇಕ್ ಅಪ್ ಆಯ್ತು. ಯುವಿ ಹೇಝಲ್ ಪತಿಯಾದರು.
ಆದರೆ ಕಿಮ್ ಮತ್ತು ಯುವಿ ಇಬ್ಬರಿಗೂ ಆಪ್ತರಾದವರ ಮನೆಯಲ್ಲಿ ಆಯೋಜಿಸಲಾದ ಪಾರ್ಟಿಯಲ್ಲಿ ಯುವಿ ಪತ್ನಿ ಮತ್ತು ಕಿಮ್ ಮುಖಾಮುಖಿಯಾದರು. ಎದುರೇ ಸಿಕ್ಕ ಮೇಲೆ ಸುಮ್ಮನೇ ಇದ್ದರೆ, ನೋಡಿದವರು ಇನ್ನೇನಾದರೂ ಕತೆ ಕಟ್ಟಿಯಾರೆಂದು ಹೇಝಲ್ ಕಿಮ್ ಗೆ ಬೇಕೋ ಬೇಡವೋ ಎಂದು ಹಾಯ್ ಹೇಳಿದರು.
ಕಷ್ಟಪಟ್ಟು ಆ ಪಾರ್ಟಿಯಲ್ಲಿ ಹದಿನೈದು ನಿಮಿಷ ಕಳೆದ ಹೇಝಲ್ ಕೊನೆಗೆ ಅಲ್ಲಿಂದ ಎಸ್ಕೇಪ್ ಆದರು. ಪುಣ್ಯಕ್ಕೆ ಅಲ್ಲಿ ಯುವಿ ಹಾಜರಿರಲಿಲ್ಲ. ಇದ್ದಿದ್ದರೆ ಅಡಕತ್ತರಿಯಲ್ಲಿ ಸಿಕ್ಕಿದ ಪರಿಸ್ಥಿತಿ ಯುವಿಯದ್ದಾಗುತ್ತಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ