ಧೋನಿ ಎಂದರೆ ಯಾರು? ಶಾರುಖ್ ಖಾನ್ ಒಂದೇ ಶಬ್ದಲ್ಲಿ ನೀಡಿದ ಉತ್ತರ ಇಲ್ಲಿದೆ ನೋಡಿ!

ಭಾನುವಾರ, 29 ಜನವರಿ 2017 (12:10 IST)
ಮುಂಬೈ: ಟ್ವಿಟರ್ ನಲ್ಲಿ ತಮ್ಮ ರಾಯಿಸ್ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಶಾರುಖ್ ಖಾನ್ ಗೆ ಅಭಿಮಾನಿಯೊಬ್ಬರು  ವಿಶಿಷ್ಟ ಪ್ರಶ್ನೆ ಕೇಳಿದ್ದರು.  ಇದಕ್ಕೆ ಬಾಲಿವುಡ್ ಬಾದ್ ಶಹಾ ಶಾರುಖ್ ಕೊಟ್ಟ ಉತ್ತರ ಏನಿತ್ತು ಗೊತ್ತಾ?

 
ಧೋನಿ ಬಗ್ಗೆ ಒಂದೇ ಶಬ್ದದಲ್ಲಿ ಶಾರುಖ್ ಹೇಳಿದ್ದು “ಆಸಮ್ ನೆಸ್” ಅಂದರೆ ‘ರೌದ್ರತೆ’ ಎಂದು. ಇತ್ತೀಚೆಗಷ್ಟೇ ಧೋನಿಗೆ ತಮ್ಮ ಚಿತ್ರದ ಹೆಸರು ಬಾಝೀಗರ್ ಎಂದು ಕರೆದಿದ್ದರು. ಇದೀಗ ಹೊಸ ಹೆಸರು ನೀಡಿದ್ದಾರೆ. ಈಗಾಗಲೇ ಎರಡು ಹೆಸರು ಆಯ್ತು. ಇನ್ನೂ ಏನೇನು ಹೆಸರಿಡುತ್ತಾರೋ ನೋಡಬೇಕು.

ಇದೇ ವೇಳೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಇಂದು ನಿರ್ಣಾಯಕ ಪಂದ್ಯ ಆಡಲಿರುವ ಟೀಂ ಇಂಡಿಯಾಗೆ ಶುಭ ಹಾರೈಸಿದ್ದಾರೆ. “ಬೆಸ್ಟ್ ಆಫ್ ಲಕ್ ಹುಡುಗರೇ. ಚೆನ್ನಾಗಿ ಆಡಿ ಗೆಲ್ಲಿ” ಎಂದು ಶುಭ ಕೋರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ