ರಾಹುಲ್ ದ್ರಾವಿಡ್ ರನ್ನು ಮೆಚ್ಚಿಕೊಂಡಿದ್ದ ಆ ಬಾಲಿವುಡ್ ನಟಿ ಯಾರು?

ಶುಕ್ರವಾರ, 28 ಏಪ್ರಿಲ್ 2017 (08:04 IST)
ಮುಂಬೈ: ರಾಹುಲ್ ದ್ರಾವಿಡ್ ರನ್ನು ಇಷ್ಟಪಡದವರು ಯಾರು? ಕ್ರಿಕೆಟ್ ನ ಜಂಟಲ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ವಾಲ್ ದ್ರಾವಿಡ್ ಹಲವರಿಗೆ ಮಾದರಿಯಾದವರು. ಅಂತಿಪ್ಪ ದ್ರಾವಿಡ್ ರನ್ನು ಭಾರೀ ಇಷ್ಟ ಎಂದು ಬಾಲಿವುಡ್ ನಟಿ ಹೇಳಿದ್ದಾರೆ.

 
ಅವರು ಕತ್ರಿನಾ ಕೈಫ್. ಪಡ್ಡೆ ಹೈಕಳ ನಿದ್ದೆಗೆಡಿಸಿದ್ದ ಕತ್ರಿನಾ ಶಾಂತ ಮೂರ್ತಿ ದ್ರಾವಿಡ್ ಇಷ್ಟ ಎಂದಿದ್ದಾರೆ. ಕ್ರಿಕೆಟಿಗರ ಪೈಕಿ ತಮಗೆ ರಾಹುಲ್ ದ್ರಾವಿಡ್ ಇಷ್ಟವಾಗುತ್ತಾರೆ. ಆದರೆ ಅವರ ಬಳಿ ಮೂರು ಶಬ್ಧಕ್ಕಿಂತ ಹೆಚ್ಚಿಗೆ ಇನ್ನೇನೂ ಮಾತನಾಡಿರಲಿಕ್ಕಿಲ್ಲ ಎಂದು ಕತ್ರಿನಾ ಹೇಳಿಕೊಂಡಿದ್ದಾರೆ.

ದ್ರಾವಿಡ್ ಒಬ್ಬ ನಿಜವಾದ ಜಂಟಲ್ ಮ್ಯಾನ್. ಅವರು ಜಾಸ್ತಿ ಮಾತನಾಡಲ್ಲ. ನಾಚಿಕೆ ಸ್ವಭಾವದವರು. ಅವರು ಆರ್ ಸಿಬಿ ತಂಡದ ನಾಯಕರಾಗಿದ್ದಾಗ, ತಂಡದ ಪ್ರಚಾರ ಅಭಿಯಾನಕ್ಕೆ ಶೂಟಿಂಗ್ ಮಾಡುವಾಗ ಭೇಟಿಯಾಗಿದ್ದೆನಷ್ಟೆ. ಆದರೂ ಅವರೆಂದರೆ ನನಗೆ ಭಾರೀ ಇಷ್ಟ ಎಂದಿದ್ದಾರೆ.

ನಿನ್ನೆಯಷ್ಟೇ ಇನ್ ಸ್ಟಾಗ್ರಾಂ ಪುಟ ತೆರೆದಿರುವ ಕತ್ರಿನಾ ಅಭಿಮಾನಿಗಳ ಜತೆ ತಮ್ಮ ಮನದಾಳದ ಮಾತು ಹಂಚಿಕೊಳ್ಳಲು ತೊಡಗಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ದ್ರಾವಿಡ್ ಮೇಲಿನ ಪ್ರೀತಿಯನ್ನು ಹಂಚಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ