ಇವರಲ್ಲಿ ಯಾರಾಗ್ತಾರೆ ಭಾರತ ತಂಡದ ಮುಂದಿನ ಕೋಚ್ ?

ಬುಧವಾರ, 21 ಜೂನ್ 2017 (09:43 IST)
ಮುಂಬೈ: ಅನಿಲ್ ಕುಂಬ್ಳೆ ರಾಜೀನಾಮೆಯಿಂದ ತೆರವಾದ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಮುಂದಿನ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

 
ಈಗಾಗಲೇ ಬಿಸಿಸಿಐ ಅರ್ಜಿ ಸಲ್ಲಿಸಿದ್ದವರಲ್ಲಿ ಆಸ್ಟ್ರೇಲಿಯಾದ ಟಾಮ್ ಮೂಡಿ, ವೀರೇಂದ್ರ ಸೆಹ್ವಾಗ್ ನಡುವೆ ಪೈಪೋಟಿಯಿದೆ. ಅವರಲ್ಲದೆ ಕಿರಿಯರ ತಂಡಕ್ಕೆ ಕೋಚ್ ಆಗಿ ಕೆಲಸ ಮಾಡುತ್ತಿರುವ ದ್ರಾವಿಡ್ ಬಗ್ಗೆ ಆಟಗಾರರಲ್ಲಿ ಸದಭಿಪ್ರಾಯವಿದೆ.

ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಟೀಂ ಇಂಡಿಯಾ ಆಟಗಾರರು ದ್ರಾವಿಡ್ ಗರಡಿಯಲ್ಲಿ ಪಳಗಿದವರು. ಹೀಗಾಗಿ ಅವರನ್ನು ಹಿರಿಯರ ತಂಡಕ್ಕೆ ಬಿಸಿಸಿಐ ಆರಿಸಿದರೂ ಅಚ್ಚರಿಯಿಲ್ಲ. ಇವರಲ್ಲದೆ, ಸ್ವತಃ ಬಿಸಿಸಿಐಗೇ ಸೆಹ್ವಾಗ್ ರ ಮೇಲೆ ವಿಶೇಷ ಒಲವಿದೆ.

ಟೀಂ ಇಂಡಿಯಾ ಆಟಗಾರರ ಮನೋಭಾವಕ್ಕೆ ಸೆಹ್ವಾಗ್ ಒಗ್ಗಬಹುದು ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಲೂ ಬಹುದು. ಅದಲ್ಲದಿದ್ದರೆ, ಪ್ರಸಕ್ತ ಬ್ಯಾಟಿಂಗ್ ಕೋಚ್ ಆಗಿರುವ ಸಂಜಯ್ ಬಂಗಾರ್ ಗೆ ಬಡ್ತಿ ನೀಡಬಹುದು.

ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡಾ ಇದೇ ಸುಳಿವು ನೀಡಿದ್ದಾರೆ. ಬಂಗಾರ್ ಬಗ್ಗೆ ಆಟಗಾರರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಅವರನ್ನೇ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದರೂ ಅಚ್ಚರಿಯಿಲ್ಲ. ಒಟ್ಟಾರೆ ರಾಷ್ಟ್ರಪತಿ ಚುನಾವಣೆಗಿಂತಲೂ ಟೀಂ ಇಂಡಿಯಾ ಕೋಚ್ ಹುದ್ದೆಗೆ ಹಾಟ್ ಸೀಟ್ ಆಗಿರುವುದಂತೂ ಸತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ