ಜಸ್ಪ್ರೀತ್ ಬುಮ್ರಾಗೆ ಬೆನ್ನು ನೋವು ಕಾಡಲು ಇದೇ ಕಾರಣ!
2019 ರಿಂದಲೂ ಬುಮ್ರಾಗೆ ಪದೇ ಪದೇ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಟೀಂ ಇಂಡಿಯಾದ ಪ್ರಮುಖ ವೇಗಿಯಾಗಿರುವ ಬುಮ್ರಾ ನೋವು ಭಾರತಕ್ಕೆ ದೊಡ್ಡ ತಲೆನೋವಾಗಿದೆ.
ಅಷ್ಟಕ್ಕೂ ಬುಮ್ರಾಗೆ ಬೆನ್ನು ನೋವಿನ ಸಮಸ್ಯೆ ಪದೇ ಪದೇ ಕಾಡಲು ಕಾರಣವೇ ಅವರ ಬೌಲಿಂಗ್ ಶೈಲಿ ಎನ್ನುತ್ತಾರೆ ತಜ್ಞರು. ಬುಮ್ರಾರದ್ದು ವಿಶಿಷ್ಟ ರೀತಿಯ ಬೌಲಿಂಗ್ ಶೈಲಿ. ಇದರಿಂದಾಗಿ ಅವರ ಬೆನ್ನಿನ ಕೆಳಭಾಗಕ್ಕೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದಾಗಿಯೇ ಅವರು ಪದೇ ಪದೇ ಬೆನ್ನು ನೋವಿಗೊಳಗಾಗುತ್ತಿದ್ದಾರೆ ಎಂದು ಹೇಳಲಾಗಿದೆ.